ಬುಧವಾರದಿಂದ ವಿದೇಶಗಳಿಗೆ ಕೊರೋನ ಲಸಿಕೆ ಪೂರೈಕೆ

ವಿಶ್ವದ ಅತಿದೊಡ್ಡ ಲಸಿಕಾ ತಯಾರಿಕೆ ದೇಶಗಳಲ್ಲಿ ಪ್ರಮುಖವಾಗಿರುವ  ಭಾರತ ಬುಧವಾರದಿಂದ ವಿದೇಶಗಳಿಗೆ ಕೋವಿಡ್- 19 ಲಸಿಕೆ ರಫ್ತು ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. 

Published: 19th January 2021 10:24 PM  |   Last Updated: 20th January 2021 12:42 PM   |  A+A-


Covid-19_Vaccine1

ಕೋವಿಡ್-19 ಲಸಿಕೆ ಕೋವಿಶೀಲ್ಡ್

Posted By : Nagaraja AB
Source : UNI

ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕಾ ತಯಾರಿಕೆ ದೇಶಗಳಲ್ಲಿ ಪ್ರಮುಖವಾಗಿರುವ  ಭಾರತ ಬುಧವಾರದಿಂದ ವಿದೇಶಗಳಿಗೆ ಕೋವಿಡ್- 19 ಲಸಿಕೆ ರಫ್ತು ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. 

ಈಗಾಗಲೇ ದೇಶದಲ್ಲಿ ಲಸಿಕಾ  ವಿತರಣೆ ಕಾರ್ಯ ಆರಂಭ ಮಾಡಲಾಗಿದೆ. ನೆರೆಯ ಭೂತಾನ್, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್, ಸೀಶೆಲ್ಸ್ , ಬಾಂಗ್ಲಾದೇಶಗಳಿಗೆ ಲಸಿಕೆ ವಿತರಿಸಲಿದೆ ಎನ್ನಲಾಗಿದೆ.  

ನೆರೆಯ ಮತ್ತು ದೇಶದೊಂದಿಗೆ ಉತ್ತಮ ಬಾಂಧವ್ಯಹೊಂದಿರುವ ಪ್ರಮುಖ ದೇಶಗಳಿಂದ ಲಸಿಕೆ ಪೂರೈಸುವಂತೆ ಹೆಚ್ಚಿನ  ಮನವಿ ಬಂದಿದೆ. ಅಸ್ಟ್ರಾಜಿನಿಕಾ ಮತ್ತು ಅಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ  ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ 2 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ತಯಾರಿಸಿದ್ದು, ಗುರುವಾರ ಬಾಂಗ್ಲಾದೇಶಕ್ಕೆ ಪೂರೈಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದ ಬಹು ದೊಡ್ಡ ಔಷಧ ತಯಾರಿಕಾ ಕಂಪನಿಯಾಗಿರುವ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp