ಬದಲಾವಣೆಗೆ ಒಪ್ಪಿದ 'ತಾಂಡವ್' ತಂಡ! ವಿವಾದಕ್ಕೆ ಇದೇ ಪ್ರಮುಖ ಕಾರಣ!

ವಿವಾದಿತ ವೆಬ್ ಧಾರಾವಾಹಿಯಲ್ಲಿ ಬದಲಾವಣೆ ಮಾಡುವುದಾಗಿ ತಾಂಡವ್ ಧಾರಾವಾಹಿಯ ನಿರ್ಮಾಣ ತಂಡ ಮಂಗಳವಾರ ಹೇಳಿದೆ.

Published: 19th January 2021 09:04 PM  |   Last Updated: 19th January 2021 10:33 PM   |  A+A-


Tandaw1

ತಾಂಡವ್ ಧಾರಾವಾಹಿಯ ಸ್ಟಿಲ್

Posted By : Nagaraja AB
Source : PTI

ಮುಂಬೈ: ವಿವಾದಿತ ವೆಬ್ ಧಾರಾವಾಹಿಯಲ್ಲಿ ಬದಲಾವಣೆ ಮಾಡುವುದಾಗಿ ತಾಂಡವ್ ಧಾರಾವಾಹಿಯ ನಿರ್ಮಾಣ ತಂಡ ಮಂಗಳವಾರ ಹೇಳಿದೆ.

ಬಾಲಿವುಡ್ ನಟ ಸೈಫ್ ಅಲಿಖಾನ್, ಡಿಂಪಲ್ ಕಪಾಡಿಯಾ, ಮೊಹಮ್ಮದ್ ಜೀಶನ್ ಅಯುಬ್ ಅಭಿನಯಿಸಿರುವ ಈ ಧಾರಾವಾಹಿ ಕಲೆದ ವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಕಾರಣದಿಂದ ದೂಡ್ಡ ವಿವಾದ ಸೃಷ್ಟಿಯಾಗಿತ್ತು.

ಕಾಲೇಜ್ ವಿದ್ಯಾರ್ಥಿ ಶಿವನ ಪಾತ್ರದಾರಿ ಜೀಶನ್ ಅಯುಬ್, ನಾಟಕದಲ್ಲಿ ಹಿಂದೂ ದೇವರು ಮಹಾದೇವ ಪಾತ್ರದಲ್ಲಿ ಕಾಣಿಸಿಕೊಂಡಿರುವುದೇ ವಿವಾದದ ಕೇಂದ್ರಬಿಂದುವಾಗಿದೆ.

ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಹೊಂದಿಲ್ಲ ಎಂಬುದನ್ನು ತಂಡ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ನಮ್ಮ ದೇಶದ ಜನರ ಭಾವನೆಗಳಿಗೆ ಗೌರವ ನೀಡುತ್ತೇವೆ. ಧರ್ಮ, ಜಾತಿ. ನಂಬಿಕೆಗಳಿಗೆ ಧಕ್ಕೆ ತರುವ ಅಥವಾ ಯಾವುದೇ ಸಂಸ್ಥೆ, ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ನೋವಿಸುವ ಉದ್ದೇಶ ಇಲ್ಲ. ವೆಬ್ ಸೀರಿಸ್ ನಲ್ಲಿ ಬದಲಾವಣೆ ಮಾಡಲು ತಾಂಡವ್ ತಂಡ ನಿರ್ಧಾರ ಕೈಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಚಾರದಲ್ಲಿ ಬೆಂಬಲ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ತಂಡ ಧನ್ಯವಾದ ಸಲ್ಲಿಸಿದೆ. ಒಂದು ವೇಳೆ ಯಾರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಮತ್ತೊಮ್ಮೆ ಕ್ಷಮೆಯಾಚಿಸುವುದಾಗಿ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp