ಯಾವುದೇ ಪ್ರಶ್ನೆಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ: ಭಾರತ ಸರ್ಕಾರಕ್ಕೆ ವಾಟ್ಸಾಪ್ ಸ್ಪಷ್ಟನೆ

ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸಾಮರ್ಥ್ಯ ವಿಸ್ತರಿಸುವ ಆಲೋಚನೆ ಹೊಂದಿಲ್ಲ ಮಾತ್ರವಲ್ಲದೆ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ ಎಂದು ವಾಟ್ಸಾಪ್ ಹೇಳಿದೆ.

Published: 20th January 2021 02:39 PM  |   Last Updated: 20th January 2021 02:50 PM   |  A+A-


ವಾಟ್ಸಾಪ್

Posted By : Raghavendra Adiga
Source : PTI

ನವದೆಹಲಿ: ತನ್ನ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ವಾಟ್ಸಾಪ್ ಗೆ ಭಾರತ ಸರ್ಕಾರ ಕೇಳಿದ್ದ ದಿನದ ತರುವಾಯ ಪ್ರಸ್ತಾವಿತ ಬದಲಾವಣೆಯು ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸಾಮರ್ಥ್ಯ ವಿಸ್ತರಿಸುವ ಆಲೋಚನೆ ಹೊಂದಿಲ್ಲ ಮಾತ್ರವಲ್ಲದೆ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ನಾವು ಮುಕ್ತವಾಗಿದ್ದೇವೆ ಎಂದು ವಾಟ್ಸಾಪ್ ಹೇಳಿದೆ.

ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ "ಏಕಪಕ್ಷೀಯ" ಬದಲಾವಣೆಗಳ ಕುರಿತು ಭಾರತ ಸರ್ಕಾರ ಮಂಗಳವಾರ ವಾಟ್ಸಾಪ್‌ಗೆ 14 ಪ್ರಶ್ನೆಗಳನ್ನು ಕೇಳಿದೆ.

"ಈ ಬದಲಾವಣೆಯು ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವ ತನ್ನ ಸಾಮರ್ಥ್ಯವನ್ನು ವಿಸ್ತರಿಸುವ ಆಲೋಚನೆ ಹೊಂದಿಲ್ಲವೆಂದು ಣಾವು ಸ್ಪಷ್ಟಪಡಿಸಲು ಬಯಸುತ್ತೇವೆ. ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಸ ಆಯ್ಕೆಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ, ಇದರಿಂದ  ತಮ್ಮ ಗ್ರಾಹಕರಿಗೆ  ಹೆಚ್ಚಿನ  ಸೇವೆ ಸಲ್ಲಿಸಬಹುದು ಮತ್ತು ನಾವು ಇನ್ನಷ್ಟು ಬೆಳೆಯಬಹುದು" ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ವಾಟ್ಸಾಪ್ ಯಾವಾಗಲೂ ವೈಯಕ್ತಿಕ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸುತ್ತದೆ, ಇದರಿಂದಾಗಿ ವಾಟ್ಸಾಪ್ ಅಥವಾ ಫೇಸ್‌ಬುಕ್ ಎರಡೂ ಅವುಗಳನ್ನು ನೋಡುವುದಿಲ್ಲ ನಾವು ತಪ್ಪು ಮಾಹಿತಿಯ ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ.ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು  ನಾವು ಮುಕ್ತವಾಗಿದ್ದೇವೆ" ಎಂದು ವಕ್ತಾರರು ಹೇಳಿದ್ದಾರೆ.

ವಾಟ್ಸಾಪ್ ಸಿಇಒ ವಿವಿಲ್ ಕ್ಯಾಥ್‌ಕಾರ್ಟ್ ಗೆ ಭಾರತ ಸರ್ಕಾರ ಬರೆದಿರುವ ಪತ್ರದಲ್ಲಿ ವಾಟ್ಸಾಪ್ ನ  ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ, ಏಕಪಕ್ಷೀಯ ಬದಲಾವಣೆ ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. , "ಜಾಗತಿಕವಾಗಿ ಭಾರತವು ವಾಟ್ಸಾಪ್‌ನ ಅತಿದೊಡ್ಡ ಬಳಕೆದಾರರ ನೆಲೆಯಾಗಿದೆ ಮತ್ತು ಅದರ ಸೇವೆಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ವಾಟ್ಸಾಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳು "ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆ ಮೇಲೆ  ಗಂಭೀರ ಪರಿಣಾಮ ಬೀರಲಿದೆ ಎಂಬ ಕಳವಳವಿದೆ."  ಪತ್ರದಲ್ಲಿ ವಿವರಿಸಲಾಗಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp