ದೆಹಲಿ ಪ್ರತಿಭಟನಾನಿರತ ರೈತರಿಗೆ ಎನ್ಐಎ ನೋಟಿಸ್: ಬ್ರಿಟಿಷ್ ಸಂಸದ ತನ್ಮಂಜೀತ್ ಸಿಂಗ್ ದೇಸಿ ಕಳವಳ

ನವದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ  ಹಲವಾರು ಜನರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೋಟಿಸ್ ಕಳುಹಿಸಿರುವ ವಿಷಯವನ್ನು ಬ್ರಿಟಿಷ್ ಲೇಬರ್ ಪಕ್ಷದ ಸಂಸದ ತನ್ಮಂಜೀತ್ ಸಿಂಗ್ ದೇಸಿ ಪ್ರಶ್ನಿಸಿದ್ದಾರೆ.

Published: 20th January 2021 03:22 PM  |   Last Updated: 20th January 2021 03:23 PM   |  A+A-


ದೆಹಲಿ ರೈತರ ಪ್ರತಿಭಟನೆ

Posted By : Raghavendra Adiga
Source : IANS

ಚಂಡೀಘರ್: ನವದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ  ಹಲವಾರು ಜನರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೋಟಿಸ್ ಕಳುಹಿಸಿರುವ ವಿಷಯವನ್ನು ಬ್ರಿಟಿಷ್ ಲೇಬರ್ ಪಕ್ಷದ ಸಂಸದ ತನ್ಮಂಜೀತ್ ಸಿಂಗ್ ದೇಸಿ ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ವಿದೇಶಾಂಗ ಸಚಿವರಿಗೆ ಪ್ರಶ್ನೆಯೊಂದನ್ನು ಕೇಳಿದ ದೇಸಿ ಸದನದ 100 ಕ್ಕೂ ಹೆಚ್ಚು ಸದಸ್ಯರು ಈಗಾಗಲೇ ಸಹಿ ಹಾಕಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ  ಆಗಲೇ ಪತ್ರವನ್ನು ಸಹ ಕಳಿಸಲಾಗಿದೆ. ಅದರಲ್ಲಿ ""ಭಾರತದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಕುರಿತಂತೆ ಆತಂಕಗಳಿದೆ, ನಿಮ್ಮ ಪ್ರತಿಕ್ರಿಯೆಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ" ಎಂದು ಬರೆಯಲಾಗಿದೆ.

"ಶಾಂತಿಯುತ ಪ್ರತಿಭಟನಾಕಾರರ ಒಕ್ಕೂಟದ ಮುಖಂಡರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಿಗೆ ನೋಟಿಸ್ ನೀಡಲು ಪ್ರಾರಂಭಿಸಿದ್ದು ಅಲ್ಲಿನ ಅಧಿಕಾರಿಗಳು ಕಿರುಕುಳ ಮತ್ತು ಬೆದರಿಕೆಯ ಅಪಾಯಕಾರಿ ವರದಿ ಮಾಡುತ್ತಿರುವುದು ಸಹ ಅತ್ಯಂತ ಕಳವಳಕಾರಿ" ದೇಸಿ ಹೇಳಿದ್ದಾರೆ.

ಧೇಸಿಯ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ರಾಜ್ಯ ಕಾರ್ಯದರ್ಶಿ ಡೊಮಿನಿಕ್ ರಾಬ್ ಸಂಸದರ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಭಾರತೀಯ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರೊಂದಿಗೆ ರೈತರ ಸಮಸ್ಯೆಯನ್ನು ಚರ್ಚಿಸಿರುವುದಾಗಿ ಮಾಹಿತಿ ನೀಡಿದರು.

ಉದಾರೀಕರಣ ಪ್ರಕ್ರಿಯೆಯ ಒಂದು ಭಾಗವಾಗಿ ಸಬ್ಸಿಡಿಗಳನ್ನು ಕಡಿತ ಮಾಡುವುದು ಸರ್ಕಾರದ ಪ್ರಮುಖ ಸುಧಾರಣಾ ಕ್ರಮವಾಗಿದೆ. ಆದರೆ ಪ್ರತಿಭಟನೆಯ ಸ್ವಾತಂತ್ರ್ಯ ಮತ್ತು ಸೂಕ್ಷ್ಮತೆಯ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ಹೇಳಬೇಕಿದೆ, ಇದಕ್ಕೂ ಮುನ್ನ, ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು 100 ಕ್ಕೂ ಹೆಚ್ಚು ಸಂಸದರು ಮತ್ತು ಭೂಮಾಲಿಕರು ಸಹಿ ಮಾಡಿದ ಪತ್ರವೊಂದನ್ನು ಪ್ರಧಾನಿ ಅವರಿಗೆ ಕಳುಹಿಸಿದ್ದು, ಮುಂದಿನ ನಿಲುವಿನ ಬಗ್ಗೆ ತಮ್ಮ ಭಾರತೀಯ ಸಹವರ್ತಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಬೇಕೆಂದು ಕೇಳಲಾಗಿದೆ.

ಈ ಪತ್ರವು ಯುಕೆ ಪ್ರಧಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕಿನ ಮಹತ್ವವನ್ನು ಪುನರುಚ್ಚರಿಸುವುದನ್ನು ಖಚಿತಪಡಿಸಲು ಇಚ್ಚಿಸಿದೆ., ಈ ಮಹತ್ವದ ವಿಷಯದ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಹೊಂದಿದೆ ಮತ್ತು ಭಾರತದ ಅವರ ಭೇಟಿ ರದ್ದಾದ ನಂತರ  ಭಾರತೀಯ ಪ್ರಧಾನ ಮಂತ್ರಿಯೊಂದಿಗೆ ಈ ವಿಷಯವನ್ನು ಎತ್ತಲು ಕೇಳಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp