ರಾಜ್ಯಗಳ ತೆರಿಗೆ ಸಂಗ್ರಹ ಕುಸಿತ, ಆರ್ಥಿಕ ಕೊರತೆ 8.7 ಲಕ್ಷ ಕೋಟಿ ರೂ. ಗೆ ಏರಿಕೆ ಸಾಧ್ಯತೆ

ಕೋವಿಡ್-19 ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ರಾಜ್ಯಗಳ ತೆರಿಗೆ ಸಂಗ್ರಹದಲ್ಲೂ ಕುಸಿತ ಕಂಡಿದೆ. 

Published: 20th January 2021 04:56 PM  |   Last Updated: 20th January 2021 06:02 PM   |  A+A-


Direct tax collections

ತೆರಿಗೆ

Posted By : Srinivas Rao BV
Source : IANS

ನವದೆಹಲಿ: ಕೋವಿಡ್-19 ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ರಾಜ್ಯಗಳ ತೆರಿಗೆ ಸಂಗ್ರಹದಲ್ಲೂ ಕುಸಿತ ಕಂಡಿದೆ. 
 
ಪರಿಣಾಮ ಈ ವರ್ಷ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ  ರಾಜ್ಯಗಳಿಗೆ ಆದಾಯ ಕೊರತೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯಗಳ ಜಿಎಫ್ ಡಿ (gross fiscal deficit)  8.7 ಲಕ್ಷ ಕೋಟಿ ಅಥವಾ ಜಿಎಸ್ ಡಿಪಿಯ ಶೇ.4.7 ರಷ್ಟು ವಿಸ್ತರಣೆಯಾಗಲಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.

ತೆರಿಗೆ ಸಂಗ್ರಹ ಕ್ರಮೇಣವಾಗಿ ಸುಧಾರಣೆ ಕಾಣುವ ಸಾಧ್ಯತೆ ಇದ್ದರೂ, ರಾಜ್ಯಗಳಿಗೆ ಆದಾಯ ಕೊರತೆಯ ಸಮಸ್ಯೆಯನ್ನು ತಂದೊಡ್ಡಲಿದ್ದು ದೀರ್ಘಾವಧಿಯಲ್ಲಿ ಸಾಲದ ಅಪಾಯಗಳಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಖರ್ಚು ಹಾಗೂ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ಸಾಲ ಮಾಡಲು ಹೆಚ್ಚುವರಿ ಅವಕಾಶ ಒದಗಿಸಿದ್ದು, ಸಾಲದ ಮಿತಿಯನ್ನು ಈ ಹಿಂದಿದ್ದ ಜಿಎಸ್ ಡಿಪಿಯ ಶೇ.2 ರಿಂದ ಶೇ.3 ಕ್ಕಿಂತ ಹೆಚ್ಚು ಪಟ್ಟು ಸಾಲ ಮಾಡಲು ಅವಕಾಶ ನೀಡಲಾಗಿದೆ. ಇದು ರಾಜ್ಯಗಳಿಗೆ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. 18 ರಾಜ್ಯಗಳಲ್ಲಿ ನಡೆದ ಅಧ್ಯಯನದಿಂದ ಕ್ರಿಸಿಲ್ ಈ ವರದಿಯನ್ನು ಪ್ರಕಟಿಸಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp