ಕೃಷಿ ಕಾನೂನುಗಳ ತಿದ್ದುಪಡಿಗೆ ಸರ್ಕಾರದ ಆಫರ್: ಕಾನೂನುಗಳ ರದ್ಧತಿ, ಎಂಎಸ್ ಪಿ ಮೇಲಿನ ಚರ್ಚೆಗೆ ರೈತರ ಪಟ್ಟು!

ವಿವಾದಾತ್ಮಕ ಮೂರು ಕೃಷಿ ಕಾನೂನುಗಳಿಗೆ  ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗೆ ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಹೇಳಿದೆ.

Published: 20th January 2021 07:53 PM  |   Last Updated: 20th January 2021 07:53 PM   |  A+A-


Farmers_delegation_arrives_at_Vigyan_Bhawan_for_their_meeting1

ರೈತರ ನಿಯೋಗ

Posted By : Nagaraja AB
Source : The New Indian Express

ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾನೂನುಗಳಿಗೆ  ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗೆ ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಹೇಳಿದೆ. ಆದರೆ, ಕಾನೂನುಗಳನ್ನು ರದ್ದುಪಡಿಸುವಂತೆ ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ. ಕನಿಷ್ಠ ಬೆಂಬಲ ಯೋಜನೆ ಕಾನೂನು ಖಾತ್ರಿ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ತಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರ ಹಾಗೂ ರೈತ ಪರ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡರಿಂದ ಮೊದಲ ಅವಧಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಯಾವುದಾದರೂ ಪ್ರತಿಕ್ರಿಯೆ ಬರುವ ಸಣ್ಣ ಭರವಸೆ ಇದೆ. ಇಲ್ಲವಾದರೆ 11ನೇ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸಬೇಕೆಂದು ರೈತ ಮುಖಂಡರು ಹೇಳಿದ್ದಾರೆ.

ಕೆಲ ರೈತರಿಗೆ ಎನ್ ಐಎ ನೀಡಿರುವ ನೋಟಿಸ್ ಕುರಿತಂತೆ  ಪ್ರಶ್ನೆ ಎತ್ತಿದ ರೈತ ಮುಖಂಡರು, ಇದು ಹೋರಾಟವನ್ನು ಬೆಂಬಲಿಸುವವರ ವಿರುದ್ಧದ ಕಿರುಕುಳವಾಗಿದೆ ಎಂದು ಆರೋಪಿಸಿದರು.  ಈ ವಿಚಾರದ ಬಗ್ಗೆ ಪರಿಶೀಲಿಸುವುದಾಗಿ ಸರ್ಕಾರದ ಪ್ರತಿನಿಧಿಗಳು ತಿಳಿಸಿದರು.

ಸರ್ಕಾರ ಹಾಗೂ ರೈತ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದರಿಂದ ಇಂದಿನ ಸಭೆಯಲ್ಲೂ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯುಧುವೀರ್ ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಚಹಾ ವಿರಾಮದ ಬಳಿಕ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಚರ್ಚೆ ನಡೆಸಲು ಇಚ್ಚಿಸಿದ್ದೇವೆ. ಜನವರಿ 26ಕ್ಕಿಂತ ಮುಂಚಿತವಾಗಿ ಮತ್ತೊಂದು ಸುತ್ತಿನ ಸಭೆ ನಡೆಸಲು ದಿನಾಂಕ ನಿಗದಿಯನ್ನು ಬಯಸಿರುವುದಾಗಿ ಸಿಂಗ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp