ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಿದ ಗುಜರಾತ್ ಸರ್ಕಾರ; ಹೆಸರೇನು ಗೊತ್ತೇ?
ಈ ವರೆಗೂ ನಗರ, ಪಟ್ಟಣ, ಊರುಗಳ ಹೆಸರನ್ನು ಮರುನಾಮಕರಣ ಮಾಡುವುದನ್ನು ಕೇಳಿದ್ದೀರಿ, ಈಗ ಗುಜರಾತ್ ನ ಸರ್ಕಾರ ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಲು ಮುಂದಾಗಿದೆ.
Published: 20th January 2021 11:51 AM | Last Updated: 20th January 2021 12:49 PM | A+A A-

ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಿದ ಗುಜರಾತ್ ಸರ್ಕಾರ; ಹೆಸರೇನು ಗೊತ್ತೇ
ಗಾಂಧಿ ನಗರ: ಈ ವರೆಗೂ ನಗರ, ಪಟ್ಟಣ, ಊರುಗಳ ಹೆಸರನ್ನು ಮರುನಾಮಕರಣ ಮಾಡುವುದನ್ನು ಕೇಳಿದ್ದೀರಿ, ಈಗ ಗುಜರಾತ್ ನ ಸರ್ಕಾರ ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಲು ಮುಂದಾಗಿದೆ.
ಡ್ರ್ಯಾಗನ್ ಹಣ್ಣಿಗೆ ಕಮಲಂ ಎಂಬ ಹೆಸರನ್ನು ನಾಮಕರಣ ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಡ್ರ್ಯಾಗನ್ ಹಣ್ಣಿನ ಹೊರ ಭಾಗ ಕಮಲದ ಆಕೃತಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ಕಮಲಮ್ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಲಿದೆ ಎಂದು ಹೇಳಿದ್ದಾರೆ/
ಡ್ರ್ಯಾಗನ್ ಎಂಬ ಹೆಸರು ಚೀನಾದೊಂದಿಗೆ ತಳುಕು ಹಾಕಿಕೊಂಡಿದೆ. ಆದ್ದರಿಂದ ಅದಕ್ಕೆ ಮರುನಾಮಕರಣ ಮಾಡುತ್ತಿದ್ದೇವೆ ಎಂದೂ ವಿಜಯ್ ರೂಪಾನಿ ತಿಳಿಸಿದ್ದು, ಕಮಲಂ ಎಂಬುದು ಕಮಲಕ್ಕೆ ಸಂಸ್ಕೃತದಲ್ಲಿರುವ ಹೆಸರಾಗಿದೆ. ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ.