ಎಂಡೋಸಲ್ಫಾನ್ ಸಂತ್ರಸ್ತರಿಗೆ ನಿರ್ಮಿಸಿದ್ದ ಮನೆಗಳು 4 ವರ್ಷಗಳಿಂದ ಖಾಲಿ, ಆದರೆ ತೆರವಿಗೆ ಜಿಲ್ಲಾಧಿಕಾರಿ ಆದೇಶ!

ಎಂಡೋಸಲ್ಫಾನ್ ಸಂತ್ರಸ್ತರಿಗೆ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ 81 ಮನೆಗಳ ಪೈಕಿ 59 ಮನೆಗಳು ಖಾಲಿ ಬಿದ್ದಿವೆ, ಉಳಿದಂತೆ ಮನೆಗಳಲ್ಲಿ ವಾಸವಿರುವವರ ಪೈಕಿ ಹಲವರಿಗೆ ಹಕ್ಕು ಪತ್ರ ಹಾಗೂ ಅವರು ವಾಸವಿರುವ ಮನೆಗಳಿಗೂ ಹೊಂದಾಣಿಕೆಯಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. 

Published: 20th January 2021 11:10 AM  |   Last Updated: 20th January 2021 12:47 PM   |  A+A-


Sreenisha Csaid her family was given the house by Pullur-Periya panchayat and Sri Sathya Sai Trust in July 2020. The trust built 45 houses for endosulfan survivors at Eriya. (Photo | EPS)

ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳು (ಸಂಗ್ರಹ ಚಿತ್ರ)

Posted By : Srinivas Rao BV
Source : Online Desk

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗೆ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ 81 ಮನೆಗಳ ಪೈಕಿ 59 ಮನೆಗಳು ಖಾಲಿ ಬಿದ್ದಿವೆ, ಉಳಿದಂತೆ ಮನೆಗಳಲ್ಲಿ ವಾಸವಿರುವವರ ಪೈಕಿ ಹಲವರಿಗೆ ಹಕ್ಕು ಪತ್ರ ಹಾಗೂ ಅವರು ವಾಸವಿರುವ ಮನೆಗಳಿಗೂ ಹೊಂದಾಣಿಕೆಯಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. 

ಪರಿಸ್ಥಿತಿ ಹೀಗಿದ್ದರೂ, ಅತ್ಯಂತ ದಕ್ಷ ಜಿಲ್ಲಾಧಿಕಾರಿ ಎಂದೇ ಖ್ಯಾತರಾಗಿರುವ ಕಾಸರಗೋಡಿನ ಡಿ. ಸಜಿತ್ ಬಾಬು ಎಂಡೋಸಲ್ಫಾನ್ ಸಂತ್ರಸ್ತರಿಗೆ ನಿರ್ಮಿಸಲಾಗಿದ್ದ ಮನೆಯಲ್ಲಿ ವಾಸಿಸುತ್ತಿರುವ ಫಲಾನುಭವಿ ಕುಟುಂಬವೊಂದನ್ನು ಅಲ್ಲಿಂದ ತೆರವುಗೊಳಿಸುವುದಕ್ಕೆ ಆದೇಶ ನೀಡಿದ್ದಾರೆ.

ಶ್ರೀನಿಶಾ ಸಿ (16) ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದು, ಎಡಭಾಗದ ಮೊಣಕೈ ಇಲ್ಲದೇ ಜನಿಸಿದ್ದರು. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ 81 ಮನೆಗಳ ಪೈಕಿ ಇವರೂ ಸಹ ಒಂದು ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದರು. ಆದರೆ ಇವರು ವಾಸಿಸುತ್ತಿದ್ದ ಮನೆ ಹಾಗೂ ಇವರಿಗೆ ಮಂಜೂರು ಮಾಡಿದ್ದ ಆದೇಶ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಈ ಕುಟುಂಬದ ತೆರವಿಗೆ ಆದೇಶ ನೀಡಿದ್ದಾರೆ.

ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳು ಇನ್ನೂ ಏಕೆ ಖಾಲಿಬಿದ್ದಿವೆ ವಿವರಣೆ ನೀಡಿ ಎಂದು 
ಜ.6 ರಂದು ಕೇರಳ ರಾಜ್ಯ ಮಾನವಹಕ್ಕುಗಳ ಆಯೋಗ (ಕೆಎಸ್ ಹೆಚ್ಆರ್ ಸಿ) ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿತ್ತು. ಈ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮನೆಗಳಲ್ಲಿ ಇರುವ ಸಂತ್ರಸ್ತರ ತೆರವಿಗೆ ಮುಂದಾಗಿದ್ದಾರೆ. ಆದರೆ ಕೆಎಸ್ ಹೆಚ್ ಆರ್ ಸಿ ನೋಟೀಸ್ ಗೆ ಇನ್ನೂ ಉತ್ತರ ನೀಡಿಲ್ಲ.

2017 ರಲ್ಲಿ ತಿರುವನಂತಪುರಂ ಮೂಲದ ಶ್ರೀ ಸತ್ಯಸಾಯಿ ಆರ್ಫನ್ ಟ್ರಸ್ಟ್, ಎನ್ ಜಿಒ ಪೆರಿಯಾ ಬಳಿ ಇರುವ ಎರಿಯಾದ ಸರ್ಕಾರದ 5 ಎಕರೆ ಪ್ರದೇಶದಲ್ಲಿ ಎಂಡೋಸಲ್ಫಾನ್ ಪೀಡಿತರು, ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಿತ್ತು, ಸರ್ಕಾರದ ಆದೇಶದ ಪ್ರಕಾರ ಸಂತ್ರಸ್ತರಿ ಪ್ರತಿ ಕುಟುಂಬಕ್ಕೆ ಸಣ್ಣದಾದ 2 ಬೆಡ್ ರೂಮ್ ನ ಮನೆ ಹಾಗೂ 10 ಸೆಂಟ್ ಗಳಷ್ಟು ಜಾಗವನ್ನು ನೀಡಬೇಕಾಗಿತ್ತು. ಅದರಂತೆಯೇ 2017 ರಲ್ಲಿ ಸಿಎಂ ಪಿಣರಾಯಿ ವಿಜಯನ್ ಮನೆಗಳು ಹಾಗೂ ಹಕ್ಕು ಪತ್ರಗಳನ್ನು 21 ಮಂದಿ ಫಲಾನುಭವಿಗಳಿಗೆ ನೀಡಿದ್ದರು. ಉಳಿದ ಮನೆಗಳು ಖಾಲಿ ಬಿದ್ದಿದ್ದವು. 

ಈ ಕುರಿತು ಪುಲ್ಲೂರ್ ಪೆರಿಯಾ ಪಂಚಾಯತ್ ನ ಅಧ್ಯಕ್ಷರಾದ ಶಾರದಾ ನಾಯರ್ ಫಲಾನುಭವಿಗಳ ಪಟ್ಟಿಯನ್ನು ಕಳಿಸಿ ಹಕ್ಕು ಪತ್ರಗಳನ್ನು ವಿತರಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಕೋರಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. 

ಈಗ ಫಲಾನುಭವಿಗಳನ್ನು ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಒತ್ತಾಯಪೂರ್ವಕವಾಗಿ ತೆರವುಗೊಳಿಸಲಿ ಎಂದು ಫಲಾನುಭವಿಗಳು ಸವಾಲು ಹಾಕಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp