ತಮಿಳು ನಾಡು: ಪೌಲ್ ದಿನಕರನ್ ಗೆ ಸೇರಿದ 28 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಕ್ರೈಸ್ತ ಧರ್ಮದ ನೀತಿಗಳನ್ನು ಬೋಧಿಸುತ್ತಿರುವ ಜೀಸಸ್ ಕಾಲ್ಸ್ ಎಂಬ ಸಂಘಟನೆಗೆ ಸೇರಿದ 28 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
Published: 20th January 2021 10:18 AM | Last Updated: 20th January 2021 10:18 AM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ಕ್ರೈಸ್ತ ಧರ್ಮದ ನೀತಿಗಳನ್ನು ಬೋಧಿಸುತ್ತಿರುವ ಜೀಸಸ್ ಕಾಲ್ಸ್ ಎಂಬ ಸಂಘಟನೆಗೆ ಸೇರಿದ 28 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ತಮಿಳು ನಾಡಿನಾದ್ಯಂತ ಈ ಕ್ರೈಸ್ತ ಸಂಘಟನೆ ತನ್ನ ಶಾಖೆಗಳನ್ನು ಹೊಂದಿದ್ದ ಅಲ್ಲೆಲ್ಲಾ ಏಕಕಾಲದಲ್ಲಿ ದಾಳಿ ನಡೆದಿದೆ. ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿದೆಯೇ ಎಂದು ಇಂದು ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಿವಂಗತ ಡಿ ಜಿ ಎಸ್ ಧಿನಕರ್ ಸ್ಥಾಪಿಸಿರುವ ಜೀಸಸ್ ಕಾಲ್ಸ್ ಅವರಿಗೆ ಸೇರಿರುವ ಕಚೇರಿಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ. ಇದೀಗ ಅವರ ಪುತ್ರ ಪೌಲ್ ದಿನಕರ್ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕುಟುಂಬವೇ ಕಾರುಣ್ಯ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯನ್ನು ಸಹ ಕೊಯಂಬತ್ತೂರಿನಲ್ಲಿ ನೋಡಿಕೊಂಡು ಹೋಗುತ್ತಿದೆ.
ಪಾಲ್ ದಿನಕರನ್ ಒಬ್ಬ ಪ್ರಮುಖ ಸುವಾರ್ತಾಬೋಧಕರಾಗಿದ್ದು, ಅವರು ಕ್ರೈಸ್ತರಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದಾರೆ.