ಜನವರಿ 30ರಂದು ಹುತಾತ್ಮ ದಿನ: ಎರಡು ನಿಮಿಷ ಮೌನವ್ರತ ಆಚರಿಸಲು ಕೇಂದ್ರ ಗೃಹ ಸಚಿವಾಲಯ ಸೂಚನೆ

ಜನವರಿ 30, ಭಾರತದಲ್ಲಿ ಪ್ರತಿವರ್ಷ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾತ್ಮಾ ಗಾಂಧಿ ಹುತಾತ್ಮವಾದ ದಿನವನ್ನು ಅವರ ಮೇಲಿನ ಗೌರವಕ್ಕಾಗಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

Published: 20th January 2021 11:25 AM  |   Last Updated: 20th January 2021 01:32 PM   |  A+A-


Mahatma Gandhi

ಮಹಾತ್ಮಾ ಗಾಂಧಿ

Posted By : Sumana Upadhyaya
Source : ANI

ನವದೆಹಲಿ: ಜನವರಿ 30, ಭಾರತದಲ್ಲಿ ಪ್ರತಿವರ್ಷ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾತ್ಮಾ ಗಾಂಧಿ ಹುತಾತ್ಮವಾದ ದಿನವನ್ನು ಅವರ ಮೇಲಿನ ಗೌರವಕ್ಕಾಗಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಗಾಂಧೀಜಿಯವರು ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಕೊಂಡಾಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನವರಿ 30ರಂದು ಹುತಾತ್ಮ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು ಅಂದು ಬೆಳಗ್ಗೆ 11 ಗಂಟೆಗೆ ಎಲ್ಲರೂ ತಮ್ಮ ಕೆಲಸಗಳನ್ನು ಬದಿಗೊತ್ತಿ 2 ನಿಮಿಷಗಳ ಕಾಲ ಮೌನಾಚರಣೆ ನಡೆಸಲು ಸೂಚಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಜನವರಿ 30, 1948ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆ ನಾಥುರಾಮ್ ಗೋಡ್ಸೆಯವರ ಕೈಯಿಂದ ನಡೆದುಹೋಯಿತು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp