ಶೀಘ್ರದಲ್ಲೇ ಬಿಜೆಪಿ ಭಾರತವನ್ನು ಕಮಲಸ್ತಾನ್ ಎಂದು ಕರೆಯಲಿದೆ: ಹಣ್ಣಿನ ಹೆಸರು ಬದಲಾವಣೆಗೆ ಎನ್ಸಿಪಿ ಟಾಂಗ್
ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡುವ ಗುಜರಾತ್ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎನ್ಸಿಪಿ, ಬಿಜೆಪಿ ಭಾರತವನ್ನು "ಕಮಲಸ್ತಾನ್" ಎಂದು ಕರೆಯಲು ಆರಂಭಿಸುವ ಸಮಯ ಹೆಚ್ಚು ದೂರ ಇಲ್ಲ...
Published: 20th January 2021 04:29 PM | Last Updated: 20th January 2021 04:29 PM | A+A A-

ಡ್ರ್ಯಾಗನ್ ಹಣ್ಣು
ಮುಂಬೈ: ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡುವ ಗುಜರಾತ್ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎನ್ಸಿಪಿ, ಬಿಜೆಪಿ ಭಾರತವನ್ನು "ಕಮಲಸ್ತಾನ್" ಎಂದು ಕರೆಯಲು ಆರಂಭಿಸುವ ಸಮಯ ಹೆಚ್ಚು ದೂರ ಇಲ್ಲ ಎಂದು ಬುಧವಾರ ತಿರುಗೇಟು ನೀಡಿದೆ.
ಬಿಜೆಪಿ ಈಗ "ಹಣ್ಣುಗಳ ಮೇಲೂ ತನ್ನ ಬ್ರಾಂಡ್ ಮಾಡಲು ಆರಂಭಿಸಿದೆ" ಎಂದು ಎನ್ಸಿಪಿ ಮುಖ್ಯ ವಕ್ತಾರ ಮಹೇಶ್ ತಪಾಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಂಗಳವಾರ ಹೇಳಿದ್ದರು.
ಗುಜರಾತ್ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ತಪಾಸೆ, "ಬಿಜೆಪಿ ಈಗ ಹಣ್ಣುಗಳ ಮೇಲೆ ಬ್ರಾಂಡ್ ಮಾಡಲು ಪ್ರಾರಂಭಿಸಿದೆ. ಅವರು ಶೀಘ್ರದಲ್ಲೇ ಹಿಂದೂಸ್ತಾನ್ ಅನ್ನು ಕಮಲಸ್ತಾನ್ ಎಂದು ಕರೆಯಲು ಆರಂಭಿಸುತ್ತಾರೆ ಎಂದರು.
ಡ್ರ್ಯಾಗನ್ ಎಂಬ ಹೆಸರು ಚೀನಾದೊಂದಿಗೆ ತಳುಕು ಹಾಕಿಕೊಂಡಿದೆ. ಆದ್ದರಿಂದ ಅದಕ್ಕೆ ಮರುನಾಮಕರಣ ಮಾಡುತ್ತಿದ್ದೇವೆ ಎಂದೂ ವಿಜಯ್ ರೂಪಾನಿ ತಿಳಿಸಿದ್ದು, ಕಮಲಂ ಎಂಬುದು ಕಮಲಕ್ಕೆ ಸಂಸ್ಕೃತದಲ್ಲಿರುವ ಹೆಸರಾಗಿದೆ. ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ.