ಯಮುನಾ ನದಿ ಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್‌ ಕಾಳಜಿ: ಎನ್‌ಜಿಟಿ ಸಮಿತಿ ವರದಿ ಸಲ್ಲಿಸುವಂತೆ ಸೂಚನೆ

ಗಂಗಾ ನದಿಯ ಪವಿತ್ರ ಉಪನದಿ ಯಮುನಾದ ನೀರಿನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತನ್ನ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ರಚಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ಮಂಗಳವಾರ  ಸೂಚನೆ ನೀಡಿದೆ. 

Published: 20th January 2021 12:10 AM  |   Last Updated: 20th January 2021 12:42 PM   |  A+A-


Supreme_Court1

ಸುಪ್ರೀಂಕೋರ್ಟ್

Posted By : Nagaraja AB
Source : UNI

ನವದೆಹಲಿ: ಗಂಗಾ ನದಿಯ ಪವಿತ್ರ ಉಪನದಿ ಯಮುನಾದ ನೀರಿನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತನ್ನ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ರಚಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ಮಂಗಳವಾರ  ಸೂಚನೆ ನೀಡಿದೆ. 

ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ಮಾಲಿನ್ಯ ರಹಿತ ನೀರು ಮೂಲಭೂತ ಹಕ್ಕು ಎಂದು  ಅಭಿಪ್ರಾಯಪಟ್ಟಿತಲ್ಲದೆ, ಯಮುನಾ ನದಿಯ ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿತು.

ತನ್ನ ಮಾಜಿ ತಜ್ಞ ಸದಸ್ಯ ಬಿ ಎಸ್ ಸಜ್ವಾನ್ ಮತ್ತು ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ಶೈಲಾಜಾ ಚಂದ್ರರನ್ನು ಒಳಗೊಂಡ 2018ರ ಜುಲೈ 26ರಂದು ರಚಿಸಲಾದ ಎನ್ ಜಿಟಿ ಸಮಿತಿಯ ವರದಿಯನ್ನು ನ್ಯಾಯಪೀಠ ಕೇಳಿದೆ.

ಕಳೆದ ಬುಧವಾರ ನಡೆದ ವಿಚಾರಣೆಯಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ), ಹರಿಯಾಣ ಸರ್ಕಾರ ನದಿಗೆ ಹೆಚ್ಚಿನ ಮಾಲಿನ್ಯಕಾರಕಗಳನ್ನು ಹೊಂದಿರುವ ನೀರನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಿತ್ತು.

ನೀರಿನಲ್ಲಿ ಅಮೋನಿಯಾ ಅಂಶ ಹೆಚ್ಚಾದಾಗ ಡಿಜೆಬಿ ಸಾಮಾನ್ಯವಾಗಿ ದೆಹಲಿಗೆ ನೀರು ಸರಬರಾಜನ್ನು ನಿಲ್ಲಿಸುತ್ತದೆ. ದೆಹಲಿಯಲ್ಲಿ ಕೂಡ ಯಮುನಾ ನದಿಗೆ ಮಾಲಿನ್ಯಕಾರಕಗಳನ್ನು ಹೊರಹಾಕುವ ಅಂಶಗಳಿವೆ ಎಂದು ಹರಿಯಾಣ ಸರ್ಕಾರ ಸಮರ್ಥನೆ ನೀಡಿತ್ತು.
ಈ ಪ್ರಕರಣಕ್ಕೆ ಸಹಾಯ ಮಾಡಲು ಹಿರಿಯ ವಕೀಲ ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್ ಕ್ಯೂರಿಯಂತೆ ನ್ಯಾಯಪೀಠ ನೇಮಿಸಿತ್ತು.

ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ, ಎಂ.ಎಸ್.ಅರೋರಾ ಸೋಮವಾರದಂತೆ ನೀರಿನ ಗುಣಮಟ್ಟದ ಮಟ್ಟ ಉತ್ತಮವಾಗಿದೆ ಮತ್ತು ಅಮೋನಿಯಂ ಮಟ್ಟವು ನಿಯಂತ್ರಣದಲ್ಲಿದೆ ಎಂದು ವರದಿ  ಸಲ್ಲಿಸಿದರು.

ಹೇಗಾದರೂ, ಯಮುನಾ ನದಿಯಲ್ಲಿ ನೀರಿನ ಮಾಲಿನ್ಯದ ಮಟ್ಟವನ್ನು ಕಡಿಮೆ ಇರುವಂತೆ ನಿಗಾ ವಹಿಸುವುದು ಕಡ್ಡಾಯವಾಗಿದೆ, ಏಕೆಂದರೆ ಇದು ದೆಹಲಿ ಜನತೆಗೆ ಕುಡಿಯುವ ನೀರಿನ ವಿಷಯವಾಗಿದೆ. ಎನ್ ಜಿಟಿಯಿಂದ ನದಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಎಂಎಸ್ ಅರೋರಾ ಮಾಹಿತಿ ನೀಡಿದರು.

Stay up to date on all the latest ರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp