ಬೀಡಿ ತರಲು ತಡವಾಗಿದ್ದಕ್ಕೆ ಮಗನಿಗೆ ಬೆಂಕಿ ಹಚ್ಚಿದ ತಂದೆ: ಚಿಕಿತ್ಸೆ ಫಲಿಸದೆ ಬಾಲಕ ಸಾವು

ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ 10 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Published: 21st January 2021 01:13 PM  |   Last Updated: 21st January 2021 01:13 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಹೈದರಾಬಾದ್: ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ 10 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ತಂದೆ ತನ್ನ ಮಗನಿಗೆ ಬೀಡಿ ತರಲು ಹೇಳಿದ್ದಾನೆ, ಮಗ  ಬೀಡಿ ತರಲು ತಡವಾದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಗನಿಗೆ ಬೆಂಕಿ ಹಚ್ಚಿದ್ದ. ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಿಸದೇ ಗುರುವಾರ ಬಾಲಕ ಚರಣ್ ಸಾವನ್ನಪ್ಪಿದ್ದಾನೆ.

ಘಟನೆ ನಂತರ ಮ್ಯಾಜಿಸ್ಟ್ರೇಟ್  ಅವರು ಸಾಯುವ ಮುನ್ನ ಗಾಯಗೊಂಡಿದ್ದ ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಾನು ಬೀಡಿ ತರಲು ತಡವಾದ ಕಾರಣ, ನನ್ನ ತಂದೆ ನನ್ನನ್ನು ಹಿಗ್ಗಾ-ಮುಗ್ಗಾ ಥಳಿಸಿದರು, ನಾವು ವಾಸಿಸುತ್ತಿದ್ದ ಗುಡಿಸಲಿನಿಂದ ನನ್ನನ್ನು ಎಳೆದು ತಂದು ಬೆಂಕಿ ಹಚ್ಚಿದ್ದಾಗಿ ಬಾಲಕ ಹೇಳಿಕೆ ದಾಖಲಿಸಿದ್ದ. ಬಾಲಕನ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧನದ ನಂತರ  ಆರೋಪಿ ರಥ್ಲಾವತ್ ಬಾಲು ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ ತನ್ನ ಮಗ ತರಗತಿಗಳಿಗೆ ಹಾಜರಾಗದೇ ಲಾಕ್ ಡೌನ್ ನಂತರ ತುಂಬಾ ಅಹಂಕಾರದಿಂದ ವರ್ತಿಸುತ್ತಿದ್ದ ಎಂದು ಆರೋಪಿ ತಂದೆ ಪೋಲೀಸರ ಬಳಿ ಹೇಳಿದ್ದಾನೆ. 

ಭಾನುವಾರ ರಾತ್ರಿ ಈ ಘಟನೆ ನಡೆದಿದೆ, ಬಾಲಕನ ತಾಯಿ ಆತನ ಜೊತೆ ಟಿವಿ ನೋಡುತ್ತಾ ಕುಳಿತಿದ್ದಳು. ಈ ವೇಳೆ ಕುಡಿದು ಬಂದ ಆರೋಪಿ ಬಾಲು,  ಮಗನಿಗೆ ಬೀಡಿ ತರುವಂತೆ ಹೇಳಿದ್ದಾನೆ, ಬೀಡಿ ತಂದುಕೊಡುವುದು ನಿಧಾನವಾದ ಕಾರಣ, ಬಾಲಕನನ್ನು ಥಳಿಸಿ,  ಆಚೆಗೆ ತಳ್ಳಿದ್ದಾನೆ. ಈ ವೇಳೆ ಬಾಲಕನ ಮೇಲೆ ಟರ್ಪೈಂಟೈನ್ ಸುರಿದು ತಾನು ಬೀಡಿ ಹಚ್ಚಿಕೊಂಡ ಬೆಂಕಿ ಕಡ್ಡಿಯಿಂದ ಮಗನಿಗೆ ಬೆಂಕಿ ಹಚ್ಚಿದ್ದಾನ.ಈ ವೇಳೆ ರಕ್ಷಣೆಗಾಗಿ ಬಾಲಕ ತಾಯಿ ಮತ್ತು ನೆರೆ ಹೊರೆಯವರ ಬಳಿ ಓಡಿದ್ದಾನೆ,  ಅವರು ಆತನ ರಕ್ಷಣೆಗಾಗಿ ಯತ್ನಿಸಿದ್ದಾರೆ.  ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದು ಬಂಧಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp