ಟ್ರ್ಯಾಕ್ಟರ್ ರ್ಯಾಲಿ: ದೆಹಲಿ ಪೊಲೀಸ್ ಮತ್ತು ರೈತರ ನಡುವಣ 2ನೇ ಸಭೆ ಕೂಡ ವಿಫಲ!

ಕೇಂದ್ರ ಸರ್ಕಾರದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಜನವರಿ 26ರಂದು ರೈತರು ನಡೆಸಲಿರುವ ಟ್ರಾಕ್ಟರ್ ರ್ಯಾಲಿ ವಿಚಾರವಾಗಿ ರೈತರು ಮತ್ತು ಪೊಲೀಸರ ನಡುವಿನ 2ನೇ ಸಭೆ ಕೂಡ ವಿಫಲವಾಗಿದ್ದು. ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದೆ.

Published: 21st January 2021 04:22 PM  |   Last Updated: 21st January 2021 04:32 PM   |  A+A-


tractor rally

ಟ್ರ್ಯಾಕ್ಟರ್ ರ್ಯಾಲಿ

Posted By : Srinivasamurthy VN
Source : PTI

ನವದೆಹಲಿ: ಕೇಂದ್ರ ಸರ್ಕಾರದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಜನವರಿ 26ರಂದು ರೈತರು ನಡೆಸಲಿರುವ ಟ್ರಾಕ್ಟರ್ ರ್ಯಾಲಿ ವಿಚಾರವಾಗಿ ರೈತರು ಮತ್ತು ಪೊಲೀಸರ ನಡುವಿನ  2ನೇ ಸಭೆ ಕೂಡ ವಿಫಲವಾಗಿದ್ದು. ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದೆ.

ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ರ್ಯಾಲಿಯನ್ನು ನಡೆಸುವ ಬೇಡಿಕೆಗೆ ರೈತರು ಅಂಟಿಕೊಂಡಿದ್ದರಿಂದ ಇಂದು ನಡೆದ ಪೊಲೀಸರು ಮತ್ತು ರೈತರ ನಡುವಿನ 2ನೇ ಸುತ್ತಿನ ಸಭೆ ಕೂಡ ವಿಫಲವಾಗಿದೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಅವರು, 'ರೈತರು ತಮ್ಮ ಟ್ರಾಕ್ಟರ್ ರ್ಯಾಲಿಯನ್ನು ದೆಹಲಿಯಿಂದ ಹೊರಗೆ ನಡೆಸಬೇಕು ಎಂದು ಪೊಲೀಸರು ಬಯಸಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಾವು ದೆಹಲಿಯೊಳಗೆ ನಮ್ಮ ಮೆರವಣಿಗೆಯನ್ನು ಶಾಂತಿಯುತವಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಇಂದು ನಡೆದ ಸಭೆಯಲ್ಲಿ  ದೆಹಲಿಯ ಔಟರ್ ರಿಂಗ್ ರಸ್ತೆಯ ಬದಲು ಕುಂಡ್ಲಿ-ಮನೇಸರ್-ಪಾಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟ್ರಾಕ್ಟರ್ ರ್ಯಾಲಿಯನ್ನು ನಡೆಸಲು ಪ್ರತಿಭಟನಾ ನಿರತ ಕೃಷಿ ಸಂಘಟನೆಗಳಿಗೆ ಪೊಲೀಸರು ಮನವೊಲಿಸಲು ಮುಂದಾಗಿದ್ದರು. ಆದರೆ ಪೊಲೀಸ್ ಅಧಿಕಾರಿಗಳ ಪ್ರಯತ್ನ ವ್ಯರ್ಥವಾಗಿದ್ದು, ತಾವು ದೆಹಲಿಯಲ್ಲೇ ಟ್ರಾಕ್ಟರ್ ರ್ಯಾಲಿ ನಡೆಸುವುದಾಗಿ ರೈತರು ಪಟ್ಟು ಹಿಡಿದ್ದಾರೆ. 

'ನಮ್ಮ ರ್ಯಾಲಿಯನ್ನು ದೆಹಲಿಯ ಹೊರಗೆ ನಡೆಸ ಬೇಕೆಂದು ಸರ್ಕಾರ ಬಯಸಿದೆ. ಆದರೆ ನಾವು ಅದನ್ನು ದೆಹಲಿಯೊಳಗೆ ನಡೆಸಲು ಬಯಸುತ್ತೇವೆ. ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರೊಬ್ಬರು ಹೇಳಿದ್ದಾರೆ.  

ದೆಹಲಿ ಜಂಟಿ ಪೊಲೀಸ್ ಆಯುಕ್ತ (ಉತ್ತರ ಶ್ರೇಣಿ) ಎಸ್ ಎಸ್ ಯಾದವ್ ಅವರ ನೇತೃತ್ವದಲ್ಲಿ ಸಿಂಗು ಗಡಿ ಬಳಿಯ ಮಂತ್ರಮ್ ರೆಸಾರ್ಟ್‌ನಲ್ಲಿ ರೈತರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ದೆಹಲಿ ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ-ಪಶ್ಚಿಮ ವಲಯ) ಸಂಜಯ್ ಸಿಂಗ್, ವಿಶೇಷ ಪೊಲೀಸ್ ಆಯುಕ್ತ (ಗುಪ್ತಚರ) ದೇಪೇಂದ್ರ ಪಾಠಕ್ ಮತ್ತು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಜನವರಿ 26 ರಂದು ಪ್ರಸ್ತಾವಿತ ರ್ಯಾಲಿಯ ಮಾರ್ಗ ಮತ್ತು ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಇದೇ ರೀತಿಯ ಸಭೆ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರ ನಡುವೆ ವಿಜ್ಞಾನ ಭವನದಲ್ಲಿ ಬುಧವಾರ ನಡೆಯಿತು. ಆದಾಗ್ಯೂ, ರೈತ ಸಂಘಗಳು ಪೊಲೀಸರ ಸಲಹೆಯನ್ನು ತಿರಸ್ಕರಿಸಿದ್ದವು. 
 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp