ನ್ಯಾಯಾಂಗ, ಸಿಬಿಐ, ಇಡಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು: ಬಾಂಬೆ ಹೈಕೋರ್ಟ್
ನ್ಯಾಯಾಂಗ, ಆರ್ಬಿಐ, ಸಿಬಿಐ ಮತ್ತು ಇಡಿಯಂತಹ ಏಜೆನ್ಸಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.
Published: 21st January 2021 06:28 PM | Last Updated: 21st January 2021 06:28 PM | A+A A-

ಬಾಂಬೆ ಹೈಕೋರ್ಟ್
ಮುಂಬೈ: ನ್ಯಾಯಾಂಗ, ಆರ್ಬಿಐ, ಸಿಬಿಐ ಮತ್ತು ಇಡಿಯಂತಹ ಏಜೆನ್ಸಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.
2016ರ ಭೂ ಕಬಳಿಕೆ ಪ್ರಕರಣದಲ್ಲಿ ಎನ್ಸಿಪಿ ನಾಯಕ ಏಕನಾಥ್ ಖಡ್ಸೆಗೆ ಕೆಲವು ದಿನಗಳವರೆಗೆ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಿದರೆ 'ಯಾವ ಸ್ವರ್ಗ ಬೀಳಲಿದೆ' ಎಂದು ಕೇಳಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ನೋಂದಾಯಿಸಿದ್ದ ಜಾರಿ ಪ್ರಕರಣ ಮಾಹಿತಿ ವರದಿಯನ್ನು(ಇಸಿಐಆರ್) ರದ್ದುಗೊಳಿಸುವಂತೆ ಕೋರಿ ಖಡ್ಸೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಖಡ್ಸೆ ಅವರ ವಕೀಲ ಆಬಾದ್ ಪಾಂಡಾ ಅವರು ಮಾಜಿ ರಾಜ್ಯ ಕಂದಾಯ ಸಚಿವರಿಗೆ ಯಾವುದೇ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಅದರಂತೆ ಜನವರಿ 25ರವರೆಗೆ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಇಡಿಯ ವಕೀಲ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಜನವರಿ 25ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ, 'ಅರ್ಜಿದಾರರಿಗೆ ಇನ್ನೂ ಕೆಲವು ದಿನಗಳವರೆಗೆ ರಕ್ಷಣೆ ನೀಡಿದರೆ ಯಾವ ಸ್ವರ್ಗ ಬೀಳಲಿದೆ? ನ್ಯಾಯಾಂಗ ಮತ್ತು ಆರ್ಬಿಐ, ಸಿಬಿಐ, ಇಡಿ ಮುಂತಾದ ಸಂಸ್ಥೆಗಳು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆ' ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದರು.
"ಈ ಏಜೆನ್ಸಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ಬಹಳ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ" ಎಂದು ನ್ಯಾಯಾಲಯ ಹೇಳಿದೆ.
68 ವರ್ಷದ ಖಡ್ಸೆ 2020ರ ಅಕ್ಟೋಬರ್ನಲ್ಲಿ ಬಿಜೆಪಿ ತೊರೆದು ಎನ್ಸಿಪಿಗೆ ಸೇರ್ಪಡೆಯಾಗಿದ್ದರು. ಇಡಿ ಸಮನ್ಸ್ ಸಂಬಂಧ ಜನವರಿ 15ರಂದು ಮುಂಬೈನಲ್ಲಿ ಇಡಿ ಮುಂದೆ ಹಾಜರಾಗಿದ್ದ ಖಡ್ಸೆ ಭೂ ಕಬಳಿಕೆ ಪ್ರಕರಣ ಸಂಬಂಧ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.