ಕೆಟಿಆರ್ 'ಶೀಘ್ರದಲ್ಲೇ' ತೆಲಂಗಾಣ ಸಿಎಂ ಆಗಲಿದ್ದಾರೆ: ಡೆಪ್ಯೂಟಿ ಸ್ಪೀಕರ್ ಗೌಡ್
ಮಹತ್ವದ ಬೆಳವಣಿಗೆಯೊಂದರಲ್ಲಿ, ತೆಲಂಗಾಣ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಟಿ ಪದ್ಮ ರಾವ್ ಗೌಡ್ ಅವರು, ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಅವರ ಪುತ್ರ, ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್....
Published: 21st January 2021 04:07 PM | Last Updated: 21st January 2021 06:11 PM | A+A A-

ಕೆಟಿಆರ್
ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ, ತೆಲಂಗಾಣ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಟಿ ಪದ್ಮ ರಾವ್ ಗೌಡ್ ಅವರು, ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಅವರ ಪುತ್ರ, ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಶೀಘ್ರದಲ್ಲೇ ತೆಲಂಗಾಣದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 6 ವರ್ಷಗಳಿಂದ ತೆಲಂಗಾಣ ಮುಖ್ಯಮಂತ್ರಿಯಾಗಿರುವ ಕೆಸಿಆರ್ ಅವರು ಈಗ ಪುತ್ರನನ್ನು ಸಿಎಂ ಮಾಡಿ, ತಾವು ರಾಷ್ಟ್ರ ರಾಜಕಾರಣದತ್ತ ಗಮನ ಕೇಂದ್ರೀಕರಿಸಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಗೌಡ್ ಅವರ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಡೆಪ್ಯೂಟಿ ಸ್ಪೀಕರ್ ಅವರು ಗೌಡ್ ಅವರು ಇಂದು ಹೈದರಾಬಾದ್ನಲ್ಲಿ ನಡೆದ ರೈಲ್ವೆ ನೌಕರರ ಸಭೆಯಲ್ಲಿ ಕೆ.ಟಿ.ರಾಮರಾವ್ ಅವರ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ.
ಗೌಡ್ ಅವರು ತಮ್ಮ ಭಾಷಣ ಮುಕ್ತಾಯಗೊಳಿಸುವ ಸಂದರ್ಭದಲ್ಲಿ, ಶೀಘ್ರದಲ್ಲೇ ಕೆಟಿಆರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. ಅಲ್ಲದೆ ಭವಿಷ್ಯದ ಸಿಎಂ ಅವರನ್ನು ಅಭಿನಂದಿಸುತ್ತೇನೆ. ರಾಮ ರಾವ್ ಅವರು ಸಿಎಂ ಆದ ನಂತರ ರೈಲ್ವೆ ನೌಕರರ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ವಿನಂತಿಸಿದರು.
ಆದರೆ, ನಂತರ ರೈಲ್ವೆ ನೌಕರರನ್ನು ಉದ್ದೇಶಿಸಿ ಮಾತನಾಡಿದ ಕೆಟಿಆರ್, ಡೆಪ್ಯೂಟಿ ಸ್ಪೀಕರ್ ಗೌಡ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.