ವೃದ್ಧ ಪೋಷಕರ ಕೂಡಿ ಹಾಕಿ ಆಹಾರ ನೀಡದೆ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು, ತಾಯಿ ಆಸ್ಪತ್ರೆಗೆ ದಾಖಲು

ವೃದ್ಧ ಪೋಷಕರನ್ನು ಕೂಡಿ ಹಾಕಿ ಆಹಾರ ನೀಡದೆ ಹೆತ್ತ ಮಗ ಹಾಗೂ ಸೊಸೆ ಚಿತ್ರಹಿಂಸೆ ನೀಡಿರುವ ಘಟನೆ ಕೊಟ್ಟಾಯಂನ ಮುಂಡಕಾಯಂನಲ್ಲಿ ಬೆಳಕಿಗೆ ಬಂದಿದೆ. 

Published: 21st January 2021 12:32 PM  |   Last Updated: 21st January 2021 01:10 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಕೊಟ್ಟಾಯಂ: ವೃದ್ಧ ಪೋಷಕರನ್ನು ಕೂಡಿ ಹಾಕಿ ಆಹಾರ ನೀಡದೆ ಹೆತ್ತ ಮಗ ಹಾಗೂ ಸೊಸೆ ಚಿತ್ರಹಿಂಸೆ ನೀಡಿರುವ ಘಟನೆ ಕೊಟ್ಟಾಯಂನ ಮುಂಡಕಾಯಂನಲ್ಲಿ ಬೆಳಕಿಗೆ ಬಂದಿದೆ. 

ಘಟನೆಯಲ್ಲಿ ಹಸಿವಿನಿಂದ ವ್ಯಕ್ತಿ ಸಾವನ್ನಪ್ಪಿದ್ದು, ಮಾನಸಿಕ ಖಿನ್ನತೆಗೊಳಗಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮೃತಪಟ್ಟ ವ್ಯಕ್ತಿಯನ್ನು ಪೊಡಿಯಾನ್  (80) ಎಂದು ಗುರ್ತಿಸಲಾಗಿದೆ. ಇವರ ಪತ್ನಿ ಅಮ್ಮಿನಿ (76)ಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಪೊಡಿಯಾನ್ ಹಾಗೂ ಅಮ್ಮಿನಿ ಇಬ್ಬರು ತಮ್ಮ ಹಿರಿಯ ಮಗ ರೆಜಿ ಜೊತೆಗೆ ವಾಸವಿದ್ದರು. ಹಲವು ದಿನಗಳ ಹಿಂದೆಯೇ ರೆಜಿ ಪೋಷಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಆಹಾರ ನೀರು ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ನೆರೆಮನೆಯವರು ಮನೆಗೆ ಬಂದು ಎಲ್ಲಿ ರಕ್ಷಣೆ ಮಾಡುತ್ತಾರೋ ಎಂದು ಮನೆಯ ಗೇಟ್ ಬಳಿಯೇ ನಾಯಿಯನ್ನು ಕಟ್ಟಿ ಹಾಕಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ರೆಜಿ ಮದ್ಯವ್ಯಸನಿಯಾಗಿದ್ದ. ಆತನ ಭಯದಿಂದ ಯಾರೂ ಮನೆಗೆ ತರಳಲು ಸಾಧ್ಯವಾಗುತ್ತಿರಲಿಲ್ಲ. ಕಿರಿಯ ಪುತ್ರ ದೂರವಿದ್ದು, ಆಶಾ ಕಾರ್ಯಕರ್ತರು ಹಾಗೂ ಇತರೆ ಸಂಘಟನೆಗಳ ಕಾರ್ಯಕರ್ತರು ಮನೆಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp