ರಾಮ ಮಂದಿರ ನಿರ್ಮಾಣಕ್ಕೆ ಸಂಸದ ಗೌತಮ್ ಗಂಭೀರ್‌ ಬರೋಬ್ಬರಿ 1 ಕೋಟಿ ರೂ. ದೇಣಿಗೆ!

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Published: 21st January 2021 07:07 PM  |   Last Updated: 21st January 2021 07:19 PM   |  A+A-


gautam gambhir

ಗೌತಮ್ ಗಂಭೀರ್

Posted By : Vishwanath S
Source : Online Desk

ನವದೆಹಲಿ: ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. 

ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಆಂದೋಲನ ಶುರುವಾಗಿದ್ದು ಭಕ್ತರಿ ತಮ್ಮ ಕೈಲಾದ ದೇಣಿಗೆಯನ್ನು ನೀಡುತ್ತಿದ್ದಾರೆ. ಇದೀಗ ಗಂಭೀರ್ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. 

ಈ ಬಗ್ಗೆ ಪ್ರಕರಣಯಲ್ಲಿ ತಿಳಿಸಿರುವ ಗಂಭೀರ್, ರಾಮ ಮಂದಿರ ನಿರ್ಮಾಣ ಭಾರತೀಯರ ನೂರಾರು ವರ್ಷಗಳ ಕನಸಾಗಿತ್ತು. ಶತಮಾನಗಳ ನಂತರ ಈ ವಿವಾದ ಕೊನೆಗೊಂಡಿದ್ದು ಮಂದಿರ ನಿರ್ಮಾಣಕ್ಕೆ ನನ್ನ ಹಾಗೂ ನನ್ನ ಕುಟುಂಬದಿಂದ ಸಣ್ಣ ಕೊಡುಗೆ ಎಂದು ತಿಳಿಸಿದ್ದಾರೆ. 

ಜನವರಿ 15ರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು ಮೊದಲ ಮೂರು ದಿನದಲ್ಲೇ 100 ಕೋಟಿ ರುಪಾಯಿ ದೇಣಿಗೆ ಸಂಗ್ರಹವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಸುಮಾರು ಐದು ಲಕ್ಷದ ಐವತ್ತು ಸಾವಿರ ಕಾರ್ಯಕರ್ತರು ದೇಶದ ಹಳ್ಳಿ ಹಳ್ಳಿಗೂ ತೆರಳಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp