ತಮಿಳುನಾಡು: ಕಮಲಾ ಹ್ಯಾರಿಸ್ ತಾಯಿಯ ಹುಟ್ಟೂರಿನಲ್ಲಿ ಸಂಭ್ರಮಾಚರಣೆ! ವಿಡಿಯೋ

 ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಇತ್ತ ತಮಿಳುನಾಡಿನ ಹಳ್ಳಿಯೊಂದರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು.

Published: 21st January 2021 12:53 AM  |   Last Updated: 21st January 2021 12:54 AM   |  A+A-


people_celebration1

ಸಂಭ್ರಮಾಚರಣೆಯಲ್ಲಿ ಜನರು

Posted By : Nagaraja AB
Source : ANI

ತಮಿಳುನಾಡು: ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಇತ್ತ ತಮಿಳುನಾಡಿನ ಹಳ್ಳಿಯೊಂದರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು.

ಕಮಲಾ ಹ್ಯಾರಿಸ್ ಅವರ ತಾಯಿಯ ಹುಟ್ಟೂರಾದ ತುಳಸೇಂದ್ರಪುರಂನಲ್ಲಿ ಬೃಹತ್ ಟಿವಿ ಮೂಲಕ ಪದಗ್ರಹಣ ಸಮಾರಂಭವನ್ನು ವೀಕ್ಷಿಸಿದ ಗ್ರಾಮಸ್ಥರು ಕರತಾಡನ ಮೂಲಕ ಅಭಿನಂದನೆ ಸಲ್ಲಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಮಲಾ ಹ್ಯಾರಿಸ್ ಭಾವಚಿತ್ರ ಹಿಡಿದು ವಿಶೇಷ ಅಭಿಮಾನ ಮೆರೆದರು.

 

ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ತುಳಸೇಂದ್ರಪುರಂ ಗ್ರಾಮದವರಾಗಿದ್ದು, ಅವರ ತಂದೆ ಡೊನಾಲ್ಡ್ ಜೆ ಹ್ಯಾರಿಸ್ ಜಮೈಕಾದವರು. ಈ ದಂಪತಿಗೆ  ಕ್ಯಾಲಿಪೋರ್ನಿಯಾದ ಓಕ್ಲಾಂಡ್ ನಲ್ಲಿ 1964ರಲ್ಲಿ ಜನಿಸಿದ ಪುತ್ರಿಯೇ ಕಮಲಾ ಹ್ಯಾರಿಸ್, ಇದೀಗ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ, ದಕ್ಷಿಣ ಏಷ್ಯಾದ ಮೊದಲ ಮಹಿಳೆಯಾಗಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp