
ಸಂಗ್ರಹ ಚಿತ್ರ
ಗುವಾಹಟಿ: ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.
ಅಸ್ಸಾಂ ಮೂಲದ ಗಣಿಕಾರರು ಯಂತ್ರದ ಸಹಾಯದಿಂದ ಸುರಂಗವನ್ನು ಅಗೆಯುತ್ತಿದ್ದರು ಆದರೆ ಅದು ಒಡೆದು 150 ಅಡಿ ಆಳದಲ್ಲಿ ಬಿದ್ದು ದುರಂತ ಸಂಭವಿಸಿದೆ. ಶವಗಳನ್ನು ಹೊರ ತೆಗೆಯಲಾಗಿದ್ದು ಶವಪರೀಕ್ಷೆಗಾಗಿ ಜಿಲ್ಲೆಯ ಖ್ಲೀಹ್ರಿಯತ್ನ ಆಸ್ಪತ್ರೆಯಲ್ಲಿ ಸಾಗಿಸಲಾಗಿದೆ.
ಬಲಿಯಾದ ಆರು ಮಂದಿ ಪೈಕಿ ಐವರನ್ನು ಗುರುತಿಸಲಾಗಿದ್ದು ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಇ ಖರ್ಮಲ್ಕಿ ತಿಳಿಸಿದ್ದಾರೆ.
2014ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ನಿಷೇಧದ ಹೊರತಾಗಿಯೂ, ಅಕ್ರಮ ಗಣಿಗಾರಿಕೆಗೆ ಹೆಗ್ಗಿಲ್ಲದೆ ನಡೆಯುತ್ತಿದೆ.