
ರಾಮ ಮಂದಿರ ಪ್ರದೇಶ
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ಪ್ರದೇಶದಲ್ಲಿ ಅಂತರ್ಜಲ ಸಮಸ್ಯೆಯಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಎರಡು ತಿಂಗಳ ನಂತರ ಮತ್ತೆ ಕೆಲಸವನ್ನು ಆರಂಭಿಸಲಾಗಿದೆ.
ಲಾರ್ಸೆನ್ ಅಂಡ್ ಟೊಬ್ರೊ, ಟಾಟಾ ಕನ್ಸಲ್ ಟಿಂಗ್ ಇಂಜಿನಿಯರ್ಸ್ ಲಿಮೆಟೆಡ್ ಇಂಜಿನಿಯರ್ ಗಳೊಂದಿಗೆ ಚರ್ಚಿಸಿದ ಬಳಿಕ ಅಡಿಪಾಯದ ವಿನ್ಯಾಸವನ್ನು ಅಂತಿಮಗೊಳಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರೊಬ್ಬರು ಹೇಳಿದ್ದಾರೆ.
ದೇವಾಲಯ ನಿರ್ಮಾಣ ಕಾಮಗಾರಿ ಪುನರ್ ಆರಂಭದ ಅಂಗವಾಗಿ ಎರಡು ದಿನಗಳ ಪೂಜೆಯನ್ನು ನಡೆಸಲಾಯಿತು. ಪೂಜೆಯ ನಂತರ ಭೂಮಿ ಅಗೆತದ ಕೆಲಸವನ್ನು ಆರಂಭಿಸಲಾಗಿದೆ. ಅವಶೇಷಗಳನ್ನು ತೆಗೆಯಲು 70 ದಿನಗಳು ಬೇಕಾಗಲಿದೆ ಎಂದು ದೇವಾಲಯ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ. ಪೂಜೆ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಮತ್ತಿತರರು ಪಾಲ್ಗೊಂಡಿದ್ದರು.