7 ದಿನಗಳಲ್ಲಿ 10 ಲಕ್ಷ ಜನರಿಗೆ ಕೊರೋನಾ ಲಸಿಕೆ: ವಿಶ್ವದಾಖಲೆ ಬರೆದ ಭಾರತ

ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿ 7 ದಿನ ಕಳೆದಿದ್ದು, ಗುರುವಾರ ಸಂಜೆ 6 ಗಂಟೆಯವರೆಗೂ ಒಟ್ಟು 10.43 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

Published: 22nd January 2021 10:07 AM  |   Last Updated: 22nd January 2021 12:44 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : UNI

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿ 7 ದಿನ ಕಳೆದಿದ್ದು, ಗುರುವಾರ ಸಂಜೆ 6 ಗಂಟೆಯವರೆಗೂ ಒಟ್ಟು 10.43 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಈ ಮೂಲಕ ಭಾರತ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ಹಿಂದಿಕ್ಕಿ ದಾಖಲೆ ಬರೆದಿದೆ. ಅಮೆರಿಕಾ ಮತ್ತು ಇಸ್ರೇಲ್ 10 ಲಕ್ಷ ಜನರಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿದ್ದವು. 

ಲಸಿಕೆ ಅಭಿಯಾನ ಆರಂಭವಾದ ದಿನ 2,07,229 ಮಂದಿ ಲಸಿಕೆ ಪಡೆದಿದ್ದರು. ನಂತರ ಭಾನುವಾರ 17,072 ಮಂದಿ, ಸೋಮವಾರ 1.48 ಲಕ್ಷ ಬುಧವಾರ 1.12 ಲಕ್ಷ ಜನರು ಲಸಿಕೆ ಪಡೆದೆಕೊಂಡಿದ್ದರು. 

ಇದರೊಂದಿಗೆ ಶುಕ್ರವಾರದವರೆಗೆ 10,43,534 ಮಂದಿಗೆ ಲಸಿಕೆ ನೀಡಲಾಗಿದೆ ಸಚಿವಾಲಯ ತಿಳಿಸಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆ ಬರೆದಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp