ಸಾಮಾಜಿಕ ಮಾಧ್ಯಮದಲ್ಲಿ ಬಿಹಾರ ಸರ್ಕಾರ, ಸಂಸದರು, ಶಾಸಕರ ವಿರುದ್ಧ ಪೋಸ್ಟ್ ಶೇರ್ ಮಾಡಿದರೆ ಜೈಲು ಗ್ಯಾರಂಟಿ
ಇನ್ನುಮುಂದೆ ಬಿಹಾರ ಸರ್ಕಾರ, ಶಾಸಕರು, ಸಂಸದರು ಮತ್ತು ಅಧಿಕಾರಿಗಳ ವಿರುದ್ಧ 'ಮಾನಹಾನಿಕರ' ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
Published: 22nd January 2021 04:55 PM | Last Updated: 22nd January 2021 04:55 PM | A+A A-

ನಿತೀಶ್ ಕುಮಾರ್
ಪಾಟ್ನಾ: ಇನ್ನುಮುಂದೆ ಬಿಹಾರ ಸರ್ಕಾರ, ಶಾಸಕರು, ಸಂಸದರು ಮತ್ತು ಅಧಿಕಾರಿಗಳ ವಿರುದ್ಧ 'ಮಾನಹಾನಿಕರ' ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೌದು, ಮಾನಹಾನಿಕರ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಹಾರ ಸರ್ಕಾರ, ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಪೋಸ್ಟ್ಗಳನ್ನು ಹಾಕುವವರ ವಿರುದ್ಧ ಸರಿಯಾದ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ.
ಸೈಬರ್ ಅಪರಾಧಗಳನ್ನು ನಿಭಾಯಿಸುವ ರಾಜ್ಯ ಆರ್ಥಿಕ ಅಪರಾಧ ವಿಭಾಗ, ಈ ಸಂಬಂಧ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಅಧಿಸೂಚನೆ ಹೊರಡಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇತ್ತೀಚೆಗೆ, ಸೋಶಿಯಲ್ ಮೀಡಿಯಾ ನಕಲಿ ಸುದ್ದಿ ಪ್ರಚಾರ ಮಾಡುವ ಹೊಣೆ ಹೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಪಕ್ಷದ ಬಗ್ಗೆ ತಪ್ಪು ಮಾಹಿತಿಯಿಂದಾಗಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದಿದ್ದರು.
ಇನ್ನು ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಅವರು, ಇದು ಸಾರ್ವಜನಿಕರ ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದಿದ್ದಾರೆ.