ಮೊದಲ ಹಂತದ ಪ್ರಾಯೋಗಿಕ ಫಲಿತಾಂಶ: ಕೋವಾಕ್ಸಿನ್ ಸುರಕ್ಷಿತ, ಗಂಭೀರ ಅಡ್ಡ ಪರಿಣಾಮ ಇಲ್ಲ

ದೇಶದಲ್ಲಿ ಕೊರೋನಾ ವೈರಸ್ ವಿರುದ್ಧದ ಮೊದಲ ಹಂತದ ಲಸಿಕೆ ಅಭಿಯಾನ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ನ ಮೊದಲ ಹಂತದ...

Published: 22nd January 2021 04:25 PM  |   Last Updated: 22nd January 2021 04:25 PM   |  A+A-


Bharat Biotech's Covaxin vaccine

ಕೋವ್ಯಾಕ್ಸಿನ್

Posted By : Lingaraj Badiger
Source : PTI

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ವಿರುದ್ಧದ ಮೊದಲ ಹಂತದ ಲಸಿಕೆ ಅಭಿಯಾನ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ನ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಗಂಭೀರ ಅಡ್ಡ ಪರಿಣಾಮ ಬೀರಿಲ್ಲ ಎಂದು ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ ನಲ್ಲಿ ಪ್ರಕಟವಾದ ಫಲಿತಾಂಶಗಳಿಂದ ಸ್ಪಷ್ಟವಾಗಿದೆ.

ಕೋವಾಕ್ಸಿನ್ ಪ್ರಾಯೋಗಿಕ ಪರೀಕ್ಷೆಯ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸಿದೆ ಎಂದು ದಿ ಲ್ಯಾನ್ಸೆಟ್ ತಿಳಿಸಿದೆ.

ಈಗ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿರುವ ಕೋವ್ಯಾಕ್ಸಿನ್ ಗೆ ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಲಸಿಕೆ ಸುರಕ್ಷಿತವಾಗಿದ್ದು, ಲಸಿಕೆ-ಸಂಬಂಧಿತ ಗಂಭೀರ ಅಡ್ಡ ಪರಿಣಾಮಗಳು ಬೀರಿಲ್ಲ ಎಂದು ಭಾರತ್ ಬಯೋಟೆಕ್ ನೆರವಿನಿಂದ ನಡೆದ ಅಧ್ಯಯನದ ಲೇಖಕರು ಉಲ್ಲೇಖಿಸಿದ್ದಾರೆ.

ಎಲ್ಲಾ ಅಡ್ಡ ಪರಿಣಾಮಗಳು ಸೌಮ್ಯ ಮತ್ತು ಮಧ್ಯಮವಾಗಿವೆ ಯಾವುದೂ ಗಂಭೀರವಾಗಿಲ್ಲ. ಮೊದಲ ಡೋಸ್ ನಂತರ ಒಂದು ಅಡ್ಡ ಪರಿಣಾಮ ಬೀರಿದ ಘಟನೆ ವರದಿಯಾಗಿದೆ. ಆದರೆ ಅದು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ಲೇಖಕರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp