ಸೆರಂ ಇನ್ಸ್ ಟಿಟ್ಯೂಟ್ ಅಗ್ನಿ ಅವಘಡ: ಕಾರ್ಮಿಕರ ಸಮಯ ಪ್ರಜ್ಞೆಯಿಂದ 200 ಮಂದಿ ಬಚಾವ್, ಸಂಸ್ಥೆಯಿಂದ 25 ಲಕ್ಷ ರೂ. ಪರಿಹಾರ

ಕೋವಿಡ್-19 ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಪಡಿಸಿ ಸುದ್ದಿಯಲ್ಲಿದ್ದ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಕಳೆದ ರಾತ್ರಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದು, ಸಂದರ್ಭಕ್ಕೆ ತಕ್ಕ ಸಮಯೋಚಿತ ನಿರ್ಧಾರದಿಂದಾಗಿ 200ಕ್ಕೂ ಹೆಚ್ಚು ಮಂದಿ ಬಚಾವಾಗಿದ್ದಾರೆ. 

Published: 22nd January 2021 08:01 AM  |   Last Updated: 22nd January 2021 12:42 PM   |  A+A-


Deputy chief minister Ajit Pawar at fire spot at Serum Institute of India, Pune.

ನಿನ್ನೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್

Posted By : Sumana Upadhyaya
Source : The New Indian Express

ಮುಂಬೈ: ಕೋವಿಡ್-19 ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಪಡಿಸಿ ಸುದ್ದಿಯಲ್ಲಿದ್ದ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಕಳೆದ ರಾತ್ರಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದು, ಸಂದರ್ಭಕ್ಕೆ ತಕ್ಕ ಸಮಯೋಚಿತ ನಿರ್ಧಾರದಿಂದಾಗಿ 200ಕ್ಕೂ ಹೆಚ್ಚು ಮಂದಿ ಬಚಾವಾಗಿದ್ದಾರೆ. 

ನಿನ್ನೆ ಅಗ್ನಿ ದುರಂತ ಸಂಭವಿಸಿದ್ದು ಕಟ್ಟಡದ ಮೂರನೇ ಮಹಡಿಯಲ್ಲಿ. ಬೆಂಕಿ ದುರಂತ ಘಟನೆ ಅನುಭವಕ್ಕೆ ಬರುತ್ತಿದ್ದಂತೆ 200ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದಿಂದ ಹೊರಗೆ ಓಡಲು ಆರಂಭಿಸಿದರು. ಆದರೆ ತಕ್ಷಣವೇ ಬೆಂಕಿ ಕೆನ್ನಾಲಿ ಕಟ್ಟಡದ ಎಲ್ಲಾ ಮೂಲೆಗಳಿಗೆ ಹರಡಲು ಆರಂಭವಾಗಿದ್ದರಿಂದ ಮತ್ತು ಬೇರೆ ಮಹಡಿಗಳಿಗೆ ಪಸರಿಸಲು ಆರಂಭಿಸಿದ್ದರಿಂದ ಕೆಲವರಿಗೆ ಓಡಿಹೋಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

''ನಾವು ಹೊರಗೆ ಹೋಗುವ ಕಡೆಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ನಮಗೆ ಏನೂ ಕಾಣಿಸುತ್ತಿರಲಿಲ್ಲ, ನಾವು ಕಿಟಕಿಯ ಬಳಿಗೆ ಹೋಗಿ ಕಟ್ಟಡದ ಮೇಲಿಂದ ಕೆಳಗೆ ಜಿಗಿದೆವು. ಹೇಗೊ ನಾವು ಬಚಾವ್ ಆಗಿ ಹೊರಗೆ ಬಂದರೆ ಸಾಧ್ಯವಾಗದವರು ಸಿಕ್ಕಿ ಅಸುನೀಗಿದರು. ಆ ಸಂದರ್ಭದಲ್ಲಿ ಸಮಯೋಚಿತ ತಕ್ಷಣ ನಿರ್ಧಾರ ಮುಖ್ಯವಾಗಿತ್ತು'' ಎಂದು ಕಾರ್ಮಿಕರೊಬ್ಬರು ಹೇಳುತ್ತಾರೆ.

ನಿನ್ನೆ ಮೃತಪಟ್ಟ ಐವರು ಕಾರ್ಮಿಕರಲ್ಲಿ ತಲಾ ಇಬ್ಬರು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೂಲದವರಾಗಿದ್ದು ಒಬ್ಬರು ಬಿಹಾರದವರಾಗಿದ್ದಾರೆ. ಅವರನ್ನು ರಾಮ ಶಂಕರ್ ಹರಿಜನ್, ಬಿಪಿನ್ ಸರೋಜ್ ಸುಶಿಲ್ ಕುಮಾರ್ ಪಾಂಡೆ, ಮಹೇಂದ್ರ ಇಂಗಲ್, ಪ್ರತೀಕ್ ಪಶ್ಟೆ ಎಂದು ಗುರುತಿಸಲಾಗಿದೆ. ಎಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದು ಕಟ್ಟಡದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬೆಂಕಿ ಸ್ಫೋಟಗೊಂಡಿದೆ.

ನಿನ್ನೆ ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಭೇಟಿ ನೀಡಿದ್ದಾರೆ. ಐವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದ್ದು, ಇಂದು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದೆ. ನಂತರವಷ್ಟೇ ಬೆಂಕಿ ಸ್ಫೋಟಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದುಬರಲಿದೆ. ತಜ್ಞರ ತಂಡ 6 ಅಂತಸ್ತಿನ ಕಟ್ಟಡದ ಪ್ರತಿ ಮಹಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ತಲಾ 25 ಲಕ್ಷ ರೂ ಪರಿಹಾರ: ಈ ಮಧ್ಯೆ ನಿನ್ನೆಯ ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸೆರಂ ಇನ್ಸ್ ಟಿಟ್ಯೂಟ್ ತಲಾ 25 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ. ಅಲ್ಲದೆ ಅವರ ಕುಟುಂಬಸ್ಥರಿಗೆ ಈ ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದಾಗಿಯೂ ತಿಳಿಸಿದೆ. 

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ನಮ್ಮೆಲ್ಲರಿಗೂ ಇಂದು ಅತ್ಯಂತ ದುಃಖದ ದಿನವಾಗಿದೆ. ವಿಷಾದನೀಯವಾಗಿ, ಮಂಜ್ರಿಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿರುವ ನಮ್ಮ ಮಾಹಿತಿ ವಿಭಾಗದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕಾರ್ಮಿಕರ ಪ್ರಾಣಹಾನಿ ಸಂಭವಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಸಿರಸ್ ಎಸ್ ಪೂನವಲ್ಲಾ ಸಂತಾಪ ಸೂಚಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp