ಕಾಶ್ಮೀರದಲ್ಲಿ ಪಾಕಿಗಳ ಕುಟಿಲ ತಂತ್ರಕ್ಕೆ ಕಡಿವಾಣ: 10 ದಿನಗಳಲ್ಲಿ 2ನೇ ಭೂಗತ ಸುರಂಗ ಪತ್ತೆಹಚ್ಚಿದ ಬಿಎಸ್ಎಫ್!

ಕಳೆದ 10 ದಿನಗಳಲ್ಲಿ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿಉಗ್ರರು ಒಳನುಸುಳುವಿಕೆಗೆ ಅನುಕೂಲವಾಗುವಂತೆ ಪಾಕಿಸ್ತಾನವು ಅಂತರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಿದ ಎರಡನೇ ಭೂಗತ ಸುರಂಗವೊಂದನ್ನು ಗಡಿ ಭದ್ರತಾ ಪಡೆ ಪತ್ತೆಹಚ್ಚಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

Published: 23rd January 2021 03:06 PM  |   Last Updated: 23rd January 2021 03:30 PM   |  A+A-


ಬಿಎಸ್ಎಫ್ ಪತ್ತೆಮಾಡಿದ ಭೂಗತ ಸುರಂಗ

Posted By : Raghavendra Adiga
Source : PTI

ನವದೆಹಲಿ: ಕಳೆದ 10 ದಿನಗಳಲ್ಲಿ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರು ಒಳನುಸುಳುವಿಕೆಗೆ ಅನುಕೂಲವಾಗುವಂತೆ ಪಾಕಿಸ್ತಾನವು ಅಂತರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಿದ ಎರಡನೇ ಭೂಗತ ಸುರಂಗವೊಂದನ್ನು ಗಡಿ ಭದ್ರತಾ ಪಡೆ ಪತ್ತೆಹಚ್ಚಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಹೀರಾನಗರ ಸೆಕ್ಟರ್‌ನ ಗಡಿ ಔಟ್ ಪೋಸ್ಟ್ ಪನ್ಸಾರ್ ಪ್ರದೇಶದಲ್ಲಿ ಆಂಟಿ-ಟೆನಲಿಂಗ್ ಕಾರ್ಯಾಚರಣೆ ವೇಳೆ ರಹಸ್ಯ ಸುರಂಗ ಪತ್ತೆಯಾಗಿದೆ ಎಂದು ಅವರು ಹೇಳಿದರು.

ಕಳೆದ 10 ದಿನಗಳಲ್ಲಿ ಹೀರಾನಗರ ವಲಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಪತ್ತೆ ಮಾಡಿದ ಎರಡನೇ ಭೂಗತ ಸುರಂಗ ಇದು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಐಬಿ ಉದ್ದಕ್ಕೂ ಪತ್ತೆಯಾದ ಸುರಂಗಗಳ ಪೈಕಿ ಕಳೆದ ಆರು ತಿಂಗಳಲ್ಲಿಇದು ನಾಲ್ಕನೆಯದಾಗಿದ್ದರೆ ಕಳೆದ ದಶಕದಲ್ಲಿ ಇದು ಹತ್ತನೆಯದಾಗಿದೆ. ಜನವರಿ 13 ರಂದು ಅದೇ ವಲಯದ ಬೊಬಿಯಾನ್ ಗ್ರಾಮದಲ್ಲಿ 150 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು. ಇದು ಪಾಕಿಸ್ತಾನ ಕಡೆಯಿಂದ ಸುಮಾರು 30 ಅಡಿ ಆಳ ಮತ್ತು ಮೂರು ಅಡಿ ವ್ಯಾಸವನ್ನು ಹೊಂದಿತ್ತು ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಡೀ ಪ್ರದೇಶವನ್ನು ಸೇನಾಪಡೆ ಸುತ್ತುವರಿದಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp