8 ದಿನಗಳಲ್ಲಿ ದೇಶಾದ್ಯಂತ 14 ಲಕ್ಷ ಜನರಿಗೆ ಕೊರೋನಾ ಲಸಿಕೆ: ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೂ ಒಟ್ಟು 14 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

Published: 23rd January 2021 04:48 PM  |   Last Updated: 23rd January 2021 04:48 PM   |  A+A-


Dr Manjunath takes coronavirus vaccine

ಲಸಿಕೆ ಪಡೆದ ಡಾ. ಸಿಎನ್ ಮಂಜುನಾಥ್

Posted By : Vishwanath S
Source : PTI

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೂ ಒಟ್ಟು 14 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಕಳೆದ 24 ಗಂಟೆಯೊಳಗೆ ಬರೋಬ್ಬರಿ 3,47,058 ಮಂದಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ದೇಶದಲ್ಲಿ 14 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಲಸಿಕೆ ಅಭಿಯಾನ ಆರಂಭವಾದ ದಿನ 2,07,229 ಮಂದಿ ಲಸಿಕೆ ಪಡೆದಿದ್ದರು. ನಂತರ ಭಾನುವಾರ 17,072 ಮಂದಿ, ಸೋಮವಾರ 1.48 ಲಕ್ಷ ಬುಧವಾರ 1.12 ಲಕ್ಷ ಜನರು ಲಸಿಕೆ ಪಡೆದೆಕೊಂಡಿದ್ದರು. ಇದರೊಂದಿಗೆ ಶುಕ್ರವಾರದವರೆಗೆ 10,43,534 ಮಂದಿಗೆ ಲಸಿಕೆ ನೀಡಲಾಗಿದೆ ಸಚಿವಾಲಯ ತಿಳಿಸಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆ ಬರೆದಿದೆ. 

ನಿನ್ನೆ ತೆಲಂಗಾಣದಲ್ಲಿ 1,10,031, ಮಹಾರಾಷ್ಟ್ರದಲ್ಲಿ 74,960, ಬಿಹಾರದಲ್ಲಿ 63,620, ಹರಿಯಾಣದಲ್ಲಿ 62,142, ಕೇರಳದಲ್ಲಿ 47,293 ಮತ್ತು ಮಧ್ಯಪ್ರದೇಶದಲ್ಲಿ 38,278 ಮಂದಿಗೆ ಲಸಿಕೆ ನೀಡಲಾಗಿದೆ. 

ಈ ಮೂಲಕ ಭಾರತ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ಹಿಂದಿಕ್ಕಿ ದಾಖಲೆ ಬರೆದಿದೆ. ಅಮೆರಿಕಾ ಮತ್ತು ಇಸ್ರೇಲ್ 10 ಲಕ್ಷ ಜನರಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿದ್ದವು. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp