ಜ.26ಕ್ಕೆ ಗಣರಾಜ್ಯೋತ್ಸವ: ದೆಹಲಿಯಲ್ಲಿ ಇಂದು ಪೂರ್ಣಪ್ರಮಾಣದ ತಾಲೀಮು, ಪ್ರಯಾಣಿಕರ ಸಂಚಾರದಲ್ಲಿ ಬದಲಾವಣೆ

2021ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಇನ್ನು ಮೂರೇ ದಿನಗಳು ಬಾಕಿ. ಅದಕ್ಕೂ ಮುನ್ನ ಸಂಪೂರ್ಣ ಧಿರಿಸು ಪೂರ್ವಾಭ್ಯಾಸ(ಡ್ರೆಸ್ ರಿಹರ್ಸಲ್) ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ರಾಜ್ ಪಥ್ ನಲ್ಲಿ ತಾಲೀಮು ನಡೆಯಲಿದೆ.

Published: 23rd January 2021 09:45 AM  |   Last Updated: 23rd January 2021 12:40 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನವದೆಹಲಿ: 2021ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಇನ್ನು ಮೂರೇ ದಿನಗಳು ಬಾಕಿ. ಅದಕ್ಕೂ ಮುನ್ನ ಸಂಪೂರ್ಣ ಧಿರಿಸು ಪೂರ್ವಾಭ್ಯಾಸ(ಡ್ರೆಸ್ ರಿಹರ್ಸಲ್) ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ರಾಜ್ ಪಥ್ ನಲ್ಲಿ ತಾಲೀಮು ನಡೆಯಲಿದೆ.

ಇಂದು ಬೆಳಗ್ಗೆ 9.50ಕ್ಕೆ ಪರೇಡ್ ಪೂರ್ವಾಭ್ಯಾಸ ವಿಜಯ್ ಚೌಕದಿಂದ ಆರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗಲಿದೆ. ರಾಜ್ ಪಥ್, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್, ಸಿ-ಹೆಕ್ಸಗನ್ ನಿಂದ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಪರೇಡ್ ಸಾಗಲಿದೆ. ರಸ್ತೆಯುದ್ದಕ್ಕೂ ಪರೇಡ್ ಸುಗಮವಾಗಿ ಸಾಗಲು ಸಕಲ ವ್ಯವಸ್ಥೆಯನ್ನು ದೆಹಲಿ ಪೊಲೀಸರು ಮಾಡಿದ್ದಾರೆ.

ಇಂದು ಸಂಪೂರ್ಣ ತಾಲೀಮು ವೇಳೆ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ದೆಹಲಿ ಮೆಟ್ರೊ ಸೇವೆ ಲಭ್ಯವಿರುತ್ತದೆ. ಆದರೂ, ಕೇಂದ್ರ ಸಚಿವಾಲಯದಲ್ಲಿ ಮತ್ತು ಉದ್ಯೋಗ ಭವನದಲ್ಲಿ ಪ್ರಯಾಣಿಕರ ಹತ್ತುವಿಕೆ ಮತ್ತು ಇಳಿಯುವಿಕೆಗೆ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಇರುವುದಿಲ್ಲ.

ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ, ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಗಣರಾಜ್ಯೋತ್ಸವ ಪರೇಡ್ ಏರ್ಪಡಿಸಲಾಗುತ್ತದೆ. ಪರೇಡ್ ಪ್ರತಿವರ್ಷದಂತೆ ಈ ವರ್ಷ ಇದ್ದರೂ ಕೂಡ ಸಾಮಾಜಿಕ ಅಂತರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಕೋವಿಡ್-19ನಿಂದಾಗಿ ಪರೇಡ್ ಮಾರ್ಗವನ್ನು ಕಡಿತಗೊಳಿಸಲಾಗುತ್ತದೆ. ಮಾಡಿದ್ದು ಪರೇಡ್ ವಿಜಯ್ ಚೌಕ್ ನಿಂದ ಆರಂಭವಾಗಿ ಪ್ರತಿ ವರ್ಷದಂತೆ ಕೆಂಪು ಕೋಟೆಯ ಬದಲಿಗೆ ಈ ವರ್ಷ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಯಾಗಲಿದೆ. ಪ್ರತಿವರ್ಷ 8.2 ಕಿಲೋ ಮೀಟರ್ ಪರೇಡ್ ಸಾಗಿದರೆ ಈ ವರ್ಷ ಕೇವಲ 3.3 ಕಿಲೋ ಮೀಟರ್ ವರೆಗೆ ಸಾಗುತ್ತದೆ. ಪ್ರತಿವರ್ಷ ಒಂದೂವರೆ ಲಕ್ಷ ಮಂದಿ ಪರೇಡ್ ವೀಕ್ಷಿಸುತ್ತಾರೆ, ಆದರೆ ಈ ವರ್ಷ ಕೇವಲ 25 ಸಾವಿರ ಮಂದಿಗೆ ಅವಕಾಶವಿದೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮತ್ತು ವಯೋವೃದ್ಧರಿಗೆ ಅವಕಾಶ ಇರುವುದಿಲ್ಲ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp