ಕಾಂಗ್ರೆಸ್ ನಲ್ಲಿ ಒಳಜಗಳ? ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಗೆಹ್ಲೋಟ್, ಆನಂದ್ ಶರ್ಮಾ ನಡುವಣ ವಾಕ್ ಸಮರ

ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಶುಕ್ರವಾರ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುನ್ನೆಲೆಗೆ ಬಂದಿತು

Published: 23rd January 2021 12:11 AM  |   Last Updated: 23rd January 2021 12:35 PM   |  A+A-


Rajasthan_CM_Ashok_Gehlot1

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Posted By : Nagaraja AB
Source : The New Indian Express

ನವದೆಹಲಿ: ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಶುಕ್ರವಾರ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುನ್ನೆಲೆಗೆ ಬಂದಿತು. ಪದಾಧಿಕಾರಿಗಳ ಚುನಾವಣೆಗಾಗಿ ಒತ್ತಾಯಿಸಿ ಪತ್ರ ಬರೆದಿರುವವರ ಕೆಲವರ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದರೆ, ಇದು ಅಗೌರವ ಎಂದು ಕರೆಯುವ ಮೂಲಕ ಆನಂದ್ ಶರ್ಮಾ ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಗೆ ದಶಕಗಳಿಂದಲೂ ಚುನಾವಣೆ ಇರಲಿಲ್ಲ. ಆದರೆ, ಇದೀಗ  ದಿಢೀರನೆ ಚುನಾವಣೆ ನಡೆಸುವ ಅಗತ್ಯದ ಬಗ್ಗೆ ಒತ್ತಾಯಿಸಿ ಪತ್ರ ಬರೆದಿರುವ ಕೆಲವರ ವಿರುದ್ಧ ಗೆಹ್ಲೋಟ್ ಕಾರ್ಯಕಾರಿಣಿ ಸಭೆ ನಂತರ ವಾಗ್ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೆಹ್ಲೋಟ್ ಮತ್ತು ಆನಂದ್ ಶರ್ಮಾ ನಡುವಿನ ವಾಕ್ ಪ್ರಹಾರ ತಿಳಿದು ಮಧ್ಯ ಪ್ರವೇಶಿಸಿದ ರಾಹುಲ್ ಗಾಂಧಿ, ಉಭಯ ನಾಯಕರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದು, ಅವರ ವಿಚಾರಗಳನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

ಚುನಾವಣೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳೋಣ, ಸದ್ಯ, ರೈತರ ಹೋರಾಟದ ಬಗ್ಗೆ ಗಮನ ಕೊಡೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದೊಳಗಿನ ವಿಚಾರಗಳನ್ನು ಕಾಂಗ್ರೆಸ್  ಅಧ್ಯಕ್ಷರಿಗೆ ಬಿಟ್ಟು , ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದ ಕಡೆಗೆ ಪ್ರತಿಯೊಬ್ಬರು ಗಮನ ಹರಿಸುವಂತೆ ಗೆಹ್ಲೋಟ್ ಹೇಳಿದರು.

ಪದಾಧಿಕಾರಿಗಳ ಚುನಾವಣೆ ಪರ ಇರುವ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಮತ್ತು ಕಪಿಲ್ ಸಿಬಲ್  ಹೆಸರನ್ನು ಉಲ್ಲೇಖಿಸದೆ ಅವರ ವಿರುದ್ಧ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ. ಅಂಬಿಕಾ ಸೋನಿ ಮತ್ತಿತರ ಹಿರಿಯ ಮುಖಂಡರು ರಾಜಸ್ಥಾನದ ಮುಖ್ಯಮಂತ್ರಿಯನ್ನು ಬೆಂಬಲಿಸಿದ್ದಾರೆ. 

ವಾಕ್ ಪ್ರಹಾರ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೀವಾಲ ಮತ್ತು ಕೆ. ಸಿ. ವೇಣುಗೋಪಾಲ್ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ. ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ ಎಂದು ಸುರ್ಜೇವಾಲ ಹೇಳಿದರು

ಚುನಾವಣೆ ನಡೆಸುವ ಸಂಬಂಧ ಯಾವುದೇ ವಾಗ್ಯುದ್ದಗಳು ನಡೆದಿಲ್ಲ. ಸಭೆ ಫಲಪ್ರಧವಾಗಿದೆ. ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಯಾವುದೇ ವಿವಾದವಿಲ್ಲ, ಈ ವಿಚಾರದಲ್ಲಿ ಪಕ್ಷದ ಸಂವಿಧಾನವನ್ನು ಅಧ್ಯಯನ ಮಾಡಲಾಗುವುದು, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ಮೊದಲು ನಡೆಸಲಾಗುವುದು, ನಂತರ ಸಿಡಬ್ಲ್ಯೂಸಿ ಚುನಾವಣೆ ನಡೆಯಲಿದೆ ಎಂದು  ಕೆ. ಸಿ. ವೇಣುಗೋಪಾಲ್ ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp