ಟ್ರಾಕ್ಟರ್ ರ್ಯಾಲಿ ವೇಳೆ ನಾಲ್ವರು ರೈತ ಮುಖಂಡರ ಹತ್ಯೆಗೆ ಪಿತೂರಿ: ಪ್ರತಿಭಟನಾ ನಿರತ ರೈತರ ಆರೋಪ

ಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆದಿದ್ದು, ಈ ಮೂಲಕ ಜನವರಿ 26ರಂದು ಗಣರಾಜ್ಯೋತ್ಸವ ದಿನ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟುಮಾಡುವುದು ದುಷ್ಕರ್ಮಿಗಳ ಯೋಜನೆಯಾಗಿತ್ತು ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

Published: 23rd January 2021 08:16 AM  |   Last Updated: 23rd January 2021 12:39 PM   |  A+A-


Farmers take out a tractor march as part of the preparations for their planned tractor parade in the national capital on Republic day during a protest against the new farm laws.

ಟ್ರಾಕ್ಟರ್ ರ್ಯಾಲಿಗೆ ರೈತರ ಪೂರ್ವಾಭ್ಯಾಸ

PTI

ನವದೆಹಲಿ: ಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆದಿದ್ದು, ಈ ಮೂಲಕ ಜನವರಿ 26ರಂದು ಗಣರಾಜ್ಯೋತ್ಸವ ದಿನ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟುಮಾಡುವುದು ದುಷ್ಕರ್ಮಿಗಳ ಯೋಜನೆಯಾಗಿತ್ತು ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

ದೆಹಲಿಯ ಸಿಂಘು ಗಡಿಭಾಗದಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಒಬ್ಬ ವ್ಯಕ್ತಿಯನ್ನು ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಪೊಲೀಸ್ ರಂತೆ ವೇಷ ಧರಿಸಿ ರೈತರ ಗುಂಪಿನ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಈಗ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ವಿಫಲಗೊಳಿಸುವ ಯತ್ನ ನಡೆಯುತ್ತಿದೆ ಎಂದು ರೈತ ನಾಯಕ ಕುಲ್ವಂತ್ ಸಿಂಗ್ ಸಂಧು ಆರೋಪಿಸಿದ್ದಾರೆ.

ಈ ಮಧ್ಯೆ, ರೈತ ಮುಖಂಡರು ಮತ್ತು ಪೊಲೀಸರ ಮಧ್ಯೆ ಟ್ರಾಕ್ಟರ್ ರ್ಯಾಲಿ ಬಗ್ಗೆ ನಿನ್ನೆ ಮಾತುಕತೆ ನಡೆದು ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಎರಡೂ ಕಡೆಯವರು ತಮ್ಮ ನಿಲುವಿಗೆ ಬದ್ಧವಾಗಿದ್ದು, ರ್ಯಾಲಿ ವೇಳೆ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಹಠಕ್ಕೆ ಬಿದ್ದಿವೆ.

ನಿನ್ನೆಯ ಸಭೆಯಲ್ಲಿ ಪೊಲೀಸರು, ಟ್ರಾಕ್ಟರ್ ರ್ಯಾಲಿಯನ್ನು ದೆಹಲಿಯ ಹೊರಭಾಗದಲ್ಲಿ ನಡೆಸಿ ಎಂದು ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ತಾವು ದೆಹಲಿಯ ಔಟರ್ ರಿಂಗ್ ರೋಡ್ ನಲ್ಲಿ ರ್ಯಾಲಿಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ರೈತರು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp