ಫಲ ನೀಡದ ಮಾತುಕತೆ; ದೆಹಲಿಯಲ್ಲಿ ಜನವರಿ 26ಕ್ಕೆ ಟ್ರ್ಯಾಕ್ಟರ್ ರ್ಯಾಲಿ!
ಜನವರಿ 26 ಗಣರಾಜ್ಯೋತ್ಸವ ದಿನದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಂಧಿಸಿದಂತೆ ರೈತ ಮುಖಂಡರು ಮತ್ತು ಪೊಲೀಸರ ನಡುವಣ ಮಾತುಕತೆ ಫಲಪ್ರಧವಾಗಿಲ್ಲ.
Published: 23rd January 2021 12:44 AM | Last Updated: 23rd January 2021 12:36 PM | A+A A-

ರೈತರ ಟ್ರ್ಯಾಕ್ಟರ್ ಮೆರವಣಿಗೆ
ನವದೆಹಲಿ: ಜನವರಿ 26 ಗಣರಾಜ್ಯೋತ್ಸವ ದಿನದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಂಧಿಸಿದಂತೆ ರೈತ ಮುಖಂಡರು ಮತ್ತು ಪೊಲೀಸರ ನಡುವಣ ಮಾತುಕತೆ ಫಲಪ್ರಧವಾಗಿಲ್ಲ.
ಸರ್ಕಾರ ಹಾಗೂ ರೈತ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡರಿಂದ ಈ ಮಾತುಕತೆ ಯಶಸ್ವಿಯಾಗಲಿಲ್ಲ. ಶಾಂತಿ ಕಾಪಾಡುವ ಹೊಣೆ ಸರ್ಕಾರದು ಎಂದು ರೈತ ಸಂಘಟನೆಗಳು ಹೇಳಿವೆ.
ಗಣರಾಜ್ಯೋತ್ಸವ ದಿನದಿಂದ ಭದ್ರತೆ ಕಾರಣ ಉಲ್ಲೇಖಿಸಿ ದೆಹಲಿಯ ಹೊರಗಡೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವಂತೆ ಪೊಲೀಸ್ ಅಧಿಕಾರಿಗಳು ರೈತರನ್ನು ಮನವಿ ಮಾಡಿಕೊಂಡಿದ್ದಾರೆ. ದೆಹಲಿಯ ಹೊರ ವರ್ತುಲ ರಸ್ತೆಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುವುದಾಗಿ ಸಭೆಯಲ್ಲಿ ಹೇಳಿದ್ದಾಗಿ ರೈತ ಮುಖಂಡರೊಬ್ಬರು ಹೇಳಿದ್ದಾರೆ.
ಸಿಂಘು ಗಡಿಯ ಮಂತ್ರ ರೆಸಾರ್ಟ್ ನಲ್ಲಿ ಜಂಟಿ ಪೊಲೀಸ್ ಆಯುಕ್ತ ಎಸ್ ಎಸ್ ಯಾದವ್ ಕರೆದಿದ್ದ ಸಭೆಯಲ್ಲಿ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಿಂಘು ಗಡಿಯಲ್ಲಿ ಶನಿವಾರ ರೈತರು ಮತ್ತು ಪೊಲೀಸರ ನಡುವಣ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಜೊತೆಗೆನ ಸಭೆಯ ನಂತರ ಶುಕ್ರವಾರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಸಭೆಯಲ್ಲಿ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದರು. ಜನವರಿ 26 ರಂದು ಯೋಜನೆಯಂತೆ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ಶಾಂತಿ ಕಾಪಾಡುವುದು ಸರ್ಕಾರದ ಹೊಣೆ ಎಂದು ಯೂನಿಯನ್ ಗಳು ಪೊಲೀಸರಿಗೆ ಹೇಳಿರುವುದಾಗಿ ಅವರು ತಿಳಿಸಿದರು.