ತಮಿಳುನಾಡು: ನಾಯಿ ಕೊಲ್ಲಲು ರೌಡಿ ಶೀಟರ್ ಗೆ 500 ರೂ ಸುಪಾರಿ, ಇಬ್ಬರ ಬಂಧನ

ಮಾಜಿ ರೌಡಿ ಶೀಟರ್ ಗೆ 500 ರೂ ಸುಪಾರಿ ನಾಯಿಯನ್ನು ಕೊಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Published: 23rd January 2021 10:32 PM  |   Last Updated: 23rd January 2021 10:32 PM   |  A+A-


dog-killing

ನಾಯಿ ಹತ್ಯೆ

Posted By : Srinivasamurthy VN
Source : The New Indian Express

ಮದುರೈ: ಮಾಜಿ ರೌಡಿ ಶೀಟರ್ ಗೆ 500 ರೂ ಸುಪಾರಿ ನಾಯಿಯನ್ನು ಕೊಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶನಿವಾರ ತಮಿಳುನಾಡಿನ ಮಧುರೈ ಜಿಲ್ಲೆಯ ಸೆಲ್ಲೂರ್ ಪೊಲೀಸರು ಕೆ ಮುತ್ತು ಸರವಣನ್ ಮತ್ತು ಎಸ್ ವಿಮಲ್ರಾಜ್ ಎಂಬುವವರನ್ನು ಬಂಧಿಸಿದ್ದಾರೆ. ಸೆಲ್ಲೂರ್ ನ ಶಿವಗಾಮಿ ರಸ್ತೆಯಲ್ಲಿ ಬೀದಿನಾಯಿಯನ್ನು ಅಮಾನುಷವಾಗಿ ಹೊಡೆದು ಕೊಲ್ಲಲಾಗಿತ್ತು. ಈ ನಾಯಿಯನ್ನು ಕೊಲ್ಲಲು ಸರವಣನ್ ಎಂಬಾತ ವಿಮಲ್ರಾಜ್ ಎಂಬ ಮಾಜಿ ರೌಡಿ ಶೀಟರ್ ಗೆ 500 ರೂ ಸುಪಾರಿ ಕೊಟ್ಟಿದ್ದ. ಸುಪಾರಿ ಪಡೆದ ವಿಮಲ್ ರಾಜ್ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. 

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಮಧುರೈನ ಉತ್ತರ ಗ್ರಾಮದ ಆಡಳಿತಾಧಿಕಾರಿ ಮುತ್ತುಮೊಳಿ ಅವರು ಈ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.  ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆ 1960 ರ ಸೆಕ್ಷನ್ 11 (ಐ) (1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 

ಮೂಲಗಳ ಪ್ರಕಾರ ಸರವಣನ್ ಆ ರಸ್ತೆಯಲ್ಲಿ ಓಡಾಡುತ್ತಿದ್ದಾಗ ನಾಯಿ ಆತನನ್ನು ಕಚ್ಚಲು ಹೋಗಿ ಅಟ್ಟಾಡಿಸಿತ್ತು. ಪ್ರತೀ ಬಾರಿ ಹೀಗೆ ಆದಾಗ ರೋಸಿ ಹೋಗಿದ್ದ ಸರವಣನ್ ಸ್ಥಳೀಯ ರೌಡಿ ಶೀಟರ್ ವಿಮಲ್ ರಾಜ್ ಗೆ 500 ರೂ ಸುಪಾರಿ ಕೊಟ್ಟಿದ್ದ. ಅದರಂತೆ ವಿಮಲ್ ರಾಜ್ ನಾಯಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ್ದ.
 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp