ಮತ್ತೆ ಮುಂಚೂಣಿಗೆ ಬಂದ ವಸುಂಧರಾ ರಾಜೆ, ರಾಜಸ್ಥಾನ ಬಿಜೆಪಿ ಕೋರ್ ಕಮಿಟಿಯಲ್ಲಿ ಸ್ಥಾನ
ಳೆದ ರಾಜಸ್ಥಾನ ವಿಧಾನಸಭೆ ಚುನಾವಣೆ ನಂತರ ಸೈಡ್ ಲೈನ್ ಆಗಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮತ್ತೆ ಮುಂಚೂಣಿಗೆ ಬಂದಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಶಮನ ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.
Published: 23rd January 2021 08:41 PM | Last Updated: 23rd January 2021 08:41 PM | A+A A-

ವಸುಂದರಾ ರಾಜೇ
ಜೈಪುರ: ಕಳೆದ ರಾಜಸ್ಥಾನ ವಿಧಾನಸಭೆ ಚುನಾವಣೆ ನಂತರ ಸೈಡ್ ಲೈನ್ ಆಗಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮತ್ತೆ ಮುಂಚೂಣಿಗೆ ಬಂದಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಶಮನ ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.
ವಿಧಾಸಭೆ ಚುನಾವಣೆ ಸೋಲಿನ ನಂತರ ಎರಡು ವರ್ಷಗಳಿಂದ ರಾಜೆ ಅವರನ್ನು ಪಕ್ಷದ ವೇದಿಕೆಯಿಂದ ದೂರವಿಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ರಾಜೆ ಬೆಂಬಲಿಗರು ಹೊಸ ಪಕ್ಷ ಸ್ಥಾಪಿಸಿರುವುದಾಗಿ ಇತ್ತೀಚಿಗೆ ಘೋಷಿಸಿಕೊಂಡಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 16 ಸದಸ್ಯರ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ವಸುಂಧರಾ ರಾಜೆ ಅವರಿಗೆ ಸ್ಥಾನ ನೀಡಿದ್ದಾರೆ.
ರಾಜೆಯಲ್ಲದೆ, ರಾಜಸ್ಥಾನದ ಮೂವರು ಕೇಂದ್ರ ಸಚಿವರು - ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಕೈಲಾಶ್ ಚೌಧರಿ ಸಹ ರಾಜಸ್ಥಾನ ಬಿಜೆಪಿ ಕೋರ್ ಕಮಿಟಿಯ ಭಾಗವಾಗಿದ್ದಾರೆ. ಇದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಗುಲಾಬ್ಚಂದ್ ಕಟಾರಿಯಾ, ಲೋಕಸಭಾ ಸಂಸದರಾದ ಕಂಕಮಲ್ ಕತಾರಾ ಮತ್ತು ಸಿಪಿ ಜೋಶಿ, ರಾಜ್ಯಸಭಾ ಸಂಸದ ರಾಜೇಂದ್ರ ಗಹ್ಲೋಟ್ ಕೋರ್ ಕಮಿಟಿಯ ಇತರ ಸದಸ್ಯರು.