'ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್': ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಆರೋಪ
ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.
Published: 24th January 2021 10:11 AM | Last Updated: 24th January 2021 10:56 AM | A+A A-

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಉನ್ನಾವೊ(ಉತ್ತರ ಪ್ರದೇಶ): ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.
ಉತ್ತರ ಪ್ರದೇಶದ ಉನ್ನಾವೊದ ಔರಸ್ ನ ಉಟ್ರಾ ದಕೌಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್, ಅವರ ಜನಪ್ರಿಯತೆ ಮುಂದೆ ಮಹಾತ್ಮಾ ಗಾಂಧಿಯವರಾಗಲಿ, ಪಂಡಿತ್ ಜವಹರಲಾಲ್ ನೆಹರೂರವರಾಗಲಿ ನಿಲ್ಲುವ ಧೈರ್ಯ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ನ ಒಳ ಸಂಚಿನಿಂದಾಗಿಯೇ ಅವರು ಹತ್ಯೆಯಾದರು ಎಂದು ಆರೋಪಿಸಿದ್ದಾರೆ.
#WATCH | "My allegation is that Congress got Subhash Chandra Bose killed....Neither Mahatma Gandhi nor Pandit Nehru could stand in front of his popularity," said BJP MP Sakshi Maharaj in Unnao yesterday pic.twitter.com/gaJJ6Le4j6
— ANI UP (@ANINewsUP) January 24, 2021