
ದೆಹಲಿ: ಆಕಾಶವಾಣಿ ಭವನದಲ್ಲಿ ಅಗ್ನಿ ಅವಘಡ
ನವದೆಹಲಿ: ದೆಹಲಿಯ ಆಕಾಶವಾಣಿ ಭವನದಲ್ಲಿ ಜ.24 ರಂದು ಅಗ್ನಿ ಅವಘಡ ಸಂಭವಿಸಿದೆ.
ಸಂಸದ್ ಮಾರ್ಗ್ ನಲ್ಲಿ ಈ ಘಟನೆ ನಡೆದಿದೆ ಎಂದು ದೆಹಲಿ ಫೈರ್ ಸರ್ವಿಸಸ್ ( ಡಿಎಫ್ಎಸ್) ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಗಾಯಗಳು ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡದ ಬಗ್ಗೆ ಬೆಳಿಗ್ಗೆ 5.57 ಕ್ಕೆ ಸುದ್ದಿ ಬಂದಿದೆ. ತಕ್ಷಣವೇ 8 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಅಗ್ನಿನಂದಿಸುವ ಕೆಲಸದಲ್ಲಿ ನಿರತವಾಗಿವೆ. 101 ನೇ ನಂಬರ್ ಕೋಠಡಿಯಿಂದ ಅಗ್ನಿ ಅನಾಹುತ ಸಂಭವಿಸಿದ್ದು, ವಿದ್ಯುತ್ ಉಪಕರಣಗಳಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.