ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಿಶ್ಚಿತ, ಪೊಲೀಸರ ಅನುಮತಿ ಸಿಕ್ಕಿದೆ: ರೈತ ಮುಖಂಡರು 

ನಾಡಿದ್ದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡಿಯೇ ಸಿದ್ದ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ. ಇದಕ್ಕೆ ದೆಹಲಿ ಪೊಲೀಸರ ಅನುಮತಿ ಸಿಕ್ಕಿದೆ. ಆದರೆ ಇಷ್ಟು ದಿನ ದೆಹಲಿಯ ಔಟರ್ ರಿಂಗ್ ರೋಡ್ ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದವರು, ಇದೀಗ ಸ್ವಲ್ಪ ಮೃದು ಭಾವನೆ ತೋರಿ ತಮ್ಮ ಹಠವನ್ನು ಸ್ವಲ್ಪ ಸಡಿಲಿಕೆ

Published: 24th January 2021 11:07 AM  |   Last Updated: 24th January 2021 11:29 AM   |  A+A-


Farmers take out a tractor rally in Amritsar on Saturday

ನಿನ್ನೆ ಅಮೃತಸರದಲ್ಲಿ ಟ್ರ್ಯಾಕ್ಟರ್ ನಲ್ಲಿ ಸಾಗಿದ ರೈತ ಮುಖಂಡರು

Posted By : Sumana Upadhyaya
Source : The New Indian Express

ಚಂಡೀಗಢ: ನಾಡಿದ್ದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡಿಯೇ ಸಿದ್ದ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ. ಇದಕ್ಕೆ ದೆಹಲಿ ಪೊಲೀಸರ ಅನುಮತಿ ಸಿಕ್ಕಿದೆ. ಆದರೆ ಇಷ್ಟು ದಿನ ದೆಹಲಿಯ ಔಟರ್ ರಿಂಗ್ ರೋಡ್ ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದವರು, ಇದೀಗ ಸ್ವಲ್ಪ ಮೃದು ಭಾವನೆ ತೋರಿ ತಮ್ಮ ಹಠವನ್ನು ಸ್ವಲ್ಪ ಸಡಿಲಿಕೆ ಮಾಡಿ ಆ ರಸ್ತೆಯ ಪ್ರಮುಖ ಭಾಗವನ್ನು ಬಿಟ್ಟು ಬೇರೆಡೆ ರ್ಯಾಲಿ ನಡೆಸಲು ಮುಂದಾಗಿದ್ದಾರೆ.

ರ್ಯಾಲಿಯಲ್ಲಿ ಸುಮಾರು 1 ಲಕ್ಷ ಟ್ರ್ಯಾಕ್ಟರ್ ಗಳು ರಸ್ತೆಯಲ್ಲಿ ಸಂಚರಿಸಲಿವೆ. 100ಕಿಲೋ ಮೀಟರ್ ಗೂ ಅಧಿಕ ದೂರದವರೆಗೆ ಐದು ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಔಟರ್ ರಿಂಗ್ ರೋಡ್ ಗೆ ಬದಲಿಗೆ ರಾಜಧಾನಿಯ ಒಳಭಾಗಗಳಲ್ಲಿ ರೈತರು ಸಂಚರಿಸಲಿದ್ದಾರೆ. ಸಿಂಘು ಮತ್ತು ಟೆಕ್ರಿ ಗಡಿಭಾಗದಿಂದ ಬ್ಯಾರಿಕೇಡ್ ಗಳನ್ನು ತೆಗೆಯಲು ಪೊಲೀಸರು ಒಪ್ಪಿಗೆ ನೀಡಿದ್ದು ದೆಹಲಿಗೆ ಟ್ರ್ಯಾಕ್ಟರ್ ಒಳಗೆ ಹೋಗಲು ಅನುವು ಮಾಡಿಕೊಡಲಿದ್ದಾರೆ. ದೆಹಲಿಯ ರಾಜ್ ಪಥ್ ನಲ್ಲಿ ಸರ್ಕಾರದಿಂದ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಈ ಪರೇಡ್ ನಡೆಯಲಿದೆ.

ರೈತರ ರ್ಯಾಲಿ ಎಲ್ಲಿ ನಡೆಸುವುದು ಎಂಬ ಬಗ್ಗೆ ರೈತ ಮುಖಂಡರು ಮತ್ತು ಪೊಲೀಸರ ಮಧ್ಯೆ ಹಲವು ಬಾರಿ ಮಾತುಕತೆಗಳು ನಡೆದು ಇಲ್ಲಿಯವರೆಗೆ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ. ಔಟರ್ ರಿಂಗ್ ರೋಡ್ ನಲ್ಲಿ ನಡೆಸುತ್ತೇವೆ ಎಂದು ರೈತರು ಹಠಕ್ಕೆ ಬಿದ್ದಿದ್ದರು. ಅದಕ್ಕೆ ದೆಹಲಿ ಪೊಲೀಸರು ಒಪ್ಪಿರಲಿಲ್ಲ. ಇದರಿಂದ ಸರ್ಕಾರದ ಅಧಿಕೃತ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಿನ್ನಡೆಯಾಗಬಹುದು ಎಂಬ ವಾದ ಪೊಲೀಸರದ್ದಾಗಿತ್ತು. ಕೊನೆಗೆ ರೈತ ಮುಖಂಡರು ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದವರಿಗೆ ಪೊಲೀಸರು ಅನುಮತಿ ಕೊಟ್ಟಿದ್ದಾರೆ.

ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರೊಂದಿಗೆ ಮಾತುಕತೆ ನಡೆಸಿದ ನಂತರ ರೈತ ಮುಖಂಡರು ಇದೀಗ ಸಂಪೂರ್ಣ ಸಜ್ಜರಾಗಿ ಶಿಸ್ತುಬದ್ಧವಾಗಿ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ದೇಶಾದ್ಯಂತ ರೈತರಿಂದ ಮತ್ತು ಬೆಂಬಲಿಗರಿಂದ ಭಾರೀ ಬೆಂಬಲವಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ನಾವು ಶಾಂತಿಯುತವಾಗಿ ಐತಿಹಾಸಿಕ ಟ್ರ್ಯಾಕ್ಟರ್ ರ್ಯಾಲಿ ಕೈಗೊಳ್ಳಲಿದ್ದು ಸರ್ಕಾರದ ಗಣರಾಜ್ಯೋತ್ಸವ ಪರೇಡ್ ಗೆ ಮತ್ತು ಭದ್ರತೆಗೆ ಯಾವುದೇ ರೀತಿಯಿಂದಲೂ ತೊಂದರೆಯಾಗುವುದಿಲ್ಲ. ಬ್ಯಾರಿಕೇಡ್ ಗಳನ್ನು ತೆಗೆದುಕೊಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದು ದೆಹಲಿಯೊಳಗೆ ಪ್ರವೇಶಿಸುತ್ತೇವೆ ಎಂದರು.

ಪಂಜಾಬ್ ಕಿಸಾನ್ ಸಂಘರ್ಷ ಸಮಿತಿಯ ಸತ್ಮಮ್ ಸಿಂಗ್ ಪನು, ಗಣರಾಜ್ಯೋತ್ಸವ ದಿನ ದೆಹಲಿಗೆ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹಲವು ರೈತರು ಬರುತ್ತಾರೆ. ದೆಹಲಿಯ ಹೊರಗೆ ಔಟರ್ ರಿಂಗ್ ರೋಡ್ ನಲ್ಲಿ ರ್ಯಾಲಿ ನಡೆಸುತ್ತೇವೆ. ದೆಹಲಿ ಪೊಲೀಸರು ಅನುಮತಿ ನೀಡುತ್ತಾರೋ, ಇಲ್ಲವೋ ಮುಖ್ಯವಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp