ದೆಹಲಿಯಲ್ಲಿ ರೈತರ ಪ್ರತಿಭಟನೆ: ಯುವಕ ಭೀತಿಯಿಂದ ಹತ್ಯೆ ಪಿತೂರಿ ಆರೋಪ ಮಾಡಿದ್ದು, ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದ ಹರ್ಯಾಣ ಪೊಲೀಸರು
ಪ್ರತಿಭಟನಾ ನಿರತ ರೈತರ ಉದ್ದೇಶಿತ ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಿ ರೈತ ಮುಖಂಡರನ್ನು ಹತ್ಯೆ ಮಾಡಲು ಯುವಕನೊಬ್ಬ ಪಿತೂರಿ ನಡೆಸಿದ್ದಾನೆ ಎಂದು ಹೇಳಿದ್ದ ಯುವಕನನ್ನು ತೀವ್ರ ವಿಚಾರಣೆ ನಡೆಸಿದ ಹರ್ಯಾಣ ಪೊಲೀಸರು ರೈತ ಮುಖಂಡರ ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕಂಡುಬರಲಿಲ್ಲ ಎಂದಿದ್ದಾರೆ.
Published: 24th January 2021 07:49 AM | Last Updated: 24th January 2021 08:52 AM | A+A A-

ಗಾಜಿಪುರ್ ನಲ್ಲಿ ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ
ಚಂಡೀಗಢ: ಪ್ರತಿಭಟನಾ ನಿರತ ರೈತರ ಉದ್ದೇಶಿತ ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಿ ರೈತ ಮುಖಂಡರನ್ನು ಹತ್ಯೆ ಮಾಡಲು ಯುವಕನೊಬ್ಬ ಪಿತೂರಿ ನಡೆಸಿದ್ದಾನೆ ಎಂದು ಹೇಳಿದ್ದ ಯುವಕನನ್ನು ತೀವ್ರ ವಿಚಾರಣೆ ನಡೆಸಿದ ಹರ್ಯಾಣ ಪೊಲೀಸರು, ರೈತ ಮುಖಂಡರ ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕಂಡುಬರಲಿಲ್ಲ ಎಂದಿದ್ದಾರೆ.
ಪ್ರತಿಭಟನಾ ಸ್ಥಳದಿಂದ ಕಾರ್ಯಕರ್ತರು ಯುವಕನನ್ನು ಹಿಡಿದು ಆತನ ಮೇಲೆ ಬೆದರಿಕೆ ಹಾಕಿದ್ದರಿಂದ ಯುವಕ ಸುಳ್ಳುಕಥೆ ಹೆಣೆದಿದ್ದಾನೆ ಎಂದೆನಿಸುತ್ತದೆ. ಯುವಕನನ್ನು 21 ವರ್ಷದ ಯೋಗೇಶ್ ರಾವತ್ ಎಂದು ಗುರುತಿಸಲಾಗಿದ್ದು, ಈತ ಸೋನಿಪತ್ ನವನಾಗಿದ್ದು ರೈತ ಮುಖಂಡರು ಆರೋಪಿಸಿದ ನಂತರ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು ಎಂದು ಎಸ್ಪಿ ಜಶಂದೀಪ್ ಸಿಂಗ್ ರಾಂಧವ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಯುವಕ ಮಾಡುತ್ತಿರುವ ಯಾವುದೇ ಆರೋಪಗಳು ನಿಜವೆಂದು ಅನಿಸುತ್ತಿಲ್ಲ, ಜನವರಿ 20 ರಂದು ಆತ ಸಂಬಂಧಿಕರನ್ನು ಭೇಟಿಯಾಗಲು ದೆಹಲಿಗೆ ಹೋಗಿ ಅದೇ ದಿನ ಸಂಜೆ ಹಿಂತಿರುಗಿದ್ದನು. ಜಿ ಟಿ ರಸ್ತೆಯಲ್ಲಿ ಪ್ರೇಮ್ ಕಾಲೊನಿ ಎಂಬುದಿದ್ದು, ಅಲ್ಲಿ ಬೀದಿ ಬದಿ ಆಹಾರ ಸೇವಿಸಿದ್ದಾನೆ. ಅಲ್ಲಿ ಕೆಲ ಕಾರ್ಯಕರ್ತರ ಜೊತೆ ಮಾತಿನ ಚಕಮಕಿ ನಡೆಸಿದ್ದು, ಆತ ಹುಡುಗಿಯರನ್ನು ಚುಡಾಯಿಸಿದ್ದಾನೆ ಎಂದು ಕಾರ್ಯಕರ್ತರ ಆರೋಪವಾಗಿತ್ತು. ನಂತರ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಈತನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತನಿಗೆ ಹೊಡೆದಿದ್ದಾರೆ ಎಂದು ಯುವಕ ನಮಗೆ ಹೇಳಿದ್ದಾನೆ. ಆತನ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ದೇಹದಲ್ಲಿ ಕೆಲ ಗುರುತುಗಳು ಕಂಡುಬಂದವು ಎಂದು ಎಸ್ಪಿ ಜಶಂದೀಪ್ ಸಿಂಗ್ ರಾಂಧವ ತಿಳಿಸಿದ್ದಾರೆ.
ರಾವತ್ ನ ತಂದೆ ಅಡುಗೆ ಕೆಲಸದವರಾಗಿದ್ದು ತಾಯಿ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಾರೆ, ಸೋನಿಪತ್ ನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈಗ ಕೊರೋನಾ ಬಂದ ಮೇಲೆ ಉದ್ಯೋಗ ಕಳೆದುಕೊಂಡ. ಆತನ ಪೋಷಕರು, ಸೋದರ, ಸ್ನೇಹಿತರು, ಮಾಜಿ ಸಹೋದ್ಯೋಗಿಗಳನ್ನು ಕೂಡ ತೀವ್ರ ವಿಚಾರಣೆ ನಡೆಸುತ್ತೇವೆ. ಇದುವರೆಗೆ ಯಾವುದೇ ಅಪರಾಧ ಹಿನ್ನೆಲೆ ಆತನದ್ದು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರ ಮೇಲಿನ ಭಯದಿಂದ ಯುವಕ ಸುಳ್ಳಿನ ಕಥೆ ಹೆಣೆದಿರಬಹುದು. ಕೆಲವನ್ನು ರೈತ ನಾಯಕರು ಹೇಳಿಕೊಟ್ಟಿರಬಹುದು, ಇನ್ನು ಕೆಲವನ್ನು ಆತನೇ ಸೃಷ್ಟಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.