ತಿಂಗಳಾಂತ್ಯಕ್ಕೆ ಮತ್ತೆ ಮೂರು ರಫೇಲ್ ವಿಮಾನ ಸಂಭವ!

ದೇಶಕ್ಕೆ 8 ರಫೇಲ್ ಸಮರ ವಿಮಾನಗಳು ಫ್ರಾನ್ಸ್ನಿಂದ ಆಗಮಿಸಿದ್ದು ಇನ್ನೂ ಮೂರು ವಿಮಾನಗಳು ತಿಂಗಳ ಕೊನೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.

Published: 24th January 2021 10:07 AM  |   Last Updated: 24th January 2021 10:07 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ದೇಶಕ್ಕೆ 8 ರಫೇಲ್ ಸಮರ ವಿಮಾನಗಳು ಫ್ರಾನ್ಸ್ನಿಂದ ಆಗಮಿಸಿದ್ದು ಇನ್ನೂ ಮೂರು ವಿಮಾನಗಳು ತಿಂಗಳ ಕೊನೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೊತೆಗೆ 5ನೇ ಜನರೇಷನ್ ಯುದ್ಧವಿಮಾನ ಯೋಜನೆ ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ 6ನೇ ಜನರೇಷನ್ ಸಾಮರ್ಥ್ಯ ಅಳವಡಿವ ಯೋಜನೆಯಿದೆ ಎಂದೂ ಹೇಳಿದರು.

ಭಾರತೀಯ ವಾಯುಪಡೆ (ಐಎಎಫ್‌) ಹಾಗೂ ಫ್ರಾನ್ಸ್‌ನ ವಾಯುಪಡೆ ಜಂಟಿಯಾಗಿ ನಡೆಸಿದ ವೈಮಾನಿಕ ಕವಾಯತು ‘ಡೆಸರ್ಟ್‌ ನೈಟ್‌–21’ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಜೊತೆಗೆ ಐದನೇ ಜನರೇಷನ್‌ ಯುದ್ಧ ವಿಮಾನ ಯೋಜನೆಯನ್ನು ಐಎಎಫ್‌ ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ ಆರನೇ ಜನರೇಷನ್‌ ಸಾಮರ್ಥ್ಯವನ್ನೂ ಅಳವಡಿಸುವ ಯೋಜನೆ ಇದೆ. ಪ್ರಸ್ತುತ ನಮ್ಮ ಬಳಿ ಇರುವ ಆಧುನಿಕ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್‌ಗಳನ್ನು ಅಳವಡಿಸುವುದು ಗುರಿಯಾಗಿದೆ’ ಎಂದು ತಿಳಿಸಿದರು. 

‘ರಫೇಲ್‌ ಯುದ್ಧ ವಿಮಾನಗಳು ಬಂದ ಸಂದರ್ಭದಲ್ಲಿ ಅವುಗಳನ್ನು ಮೊದಲು ಕಾರ್ಯಾಚರಣೆಗೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಆಗಿತ್ತು. ಈಗಾಗಲೇ ಇದನ್ನು ನಾವು ಸಾಧಿಸಿದ್ದು, ಡೆಸರ್ಟ್‌ ನೈಟ್‌ನಲ್ಲಿ ರಫೇಲ್‌ ಕವಾಯತು ಇದರ ಫಲಿತಾಂಶ. ಮುಂದಿನ ವರ್ಷಾಂತ್ಯದೊಳಗೆ ಎಲ್ಲ ರಫೇಲ್‌ ಯುದ್ಧ ವಿಮಾನಗಳು ಪೂರೈಕೆ ಆಗಲಿವೆ’ ಎಂದಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp