'ನೇತಾಜಿ ಧರ್ಮನಿಷ್ಠ ಹಿಂದೂ ಆಗಿದ್ದರು, ಆದರೆ ಎಲ್ಲಾ ಮತಗಳನ್ನೂ ಗೌರವಿಸುತ್ತಿದ್ದರು'

ದೇಶಾದ್ಯಂತ ನೇತಾಜಿ ಸುಭಾಷ್ ಚಂದ್ರ ಬೋಸರ 125 ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಜ.23 ರಂದು ಜನ್ಮದಿನದ ಅಂಗವಾಗಿ ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಮಾತನಾಡಿದ್ದು, ಸುಭಾಷ್ ಚಂದ್ರ ಬೋಸರು ಧರ್ಮನಿಷ್ಠ ಹಿಂದೂ ಆಗಿದ್ದರು ಎಂದು ಹೇಳಿದ್ದಾರೆ. 

Published: 24th January 2021 12:12 PM  |   Last Updated: 24th January 2021 12:12 PM   |  A+A-


Anita Bose

ಅನಿತಾ ಬೋಸ್

Posted By : Srinivas Rao BV
Source : Online Desk

ಕೋಲ್ಕತ್ತಾ: ದೇಶಾದ್ಯಂತ ನೇತಾಜಿ ಸುಭಾಷ್ ಚಂದ್ರ ಬೋಸರ 125 ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಜ.23 ರಂದು ಜನ್ಮದಿನದ ಅಂಗವಾಗಿ ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಮಾತನಾಡಿದ್ದು, ಸುಭಾಷ್ ಚಂದ್ರ ಬೋಸರು ಧರ್ಮನಿಷ್ಠ ಹಿಂದೂ ಆಗಿದ್ದರು ಎಂದು ಹೇಳಿದ್ದಾರೆ. 

"ಧರ್ಮನಿಷ್ಠ ಹಿಂದೂ ಆಗಿದ್ದರೂ ನೇತಾಜಿ ಅವರು ಎಲ್ಲಾ ಮತಗಳನ್ನೂ ಗೌರವಿಸುತ್ತಿದ್ದರು. ತಾವು ಧರ್ಮನಿಷ್ಠರಾಗಿದ್ದರೂ ಸಹ ತಮ್ಮ ಅನುಯಾಯಿಗಳನ್ನು, ಇಂಡಿಯನ್ ನ್ಯಾಷನಲ್ ಆರ್ಮಿ, ಅವರ ಸ್ನೇಹಿತರು, ಕುಟುಂಬ ಸದಸ್ಯರನ್ನು ಎಲ್ಲಾ ಮತಗಳನ್ನು ಗೌರವಿಸುವಂತೆ ಪ್ರೇರೇಪಿಸುತ್ತಿದ್ದರು ಎಂದು ಅನಿತಾ ಬೋಸ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ತಮ್ಮ ತಂದೆಯದ್ದು ಚಿಂತನೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಎಂದಿರುವ ಅನಿತಾ ಬೋಸ್, ಆಧುನಿಕ, ಪ್ರಬುದ್ಧ, ಆಳವಾಗಿ ಬೇರೂರಿದ ಇತಿಹಾಸ, ತತ್ವಶಾಸ್ತ್ರ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನೊಳಗೊಂಡ ಭಾರತದ ಕನಸು ನೇತಾಜಿಯವರದ್ದಾಗಿತ್ತು ಎಂದು ಹೇಳಿದ್ದಾರೆ. ನೇತಾಜಿ ಅವರ ಚಿಂತನೆಗಳು ಹಾಗೂ ಆದರ್ಶಗಳಿಂದ ನಾವು ಸ್ಪೂರ್ತಿ ಪಡೆಯಬಹುದು ಎಂದು ಅನಿತಾ ಬೋಸ್ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp