ಭಾರತದ ರೈತರ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300ಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳ ಜನನ!

ಭಾರತದ ರೈತರ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300ಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ ಎಂದು ದೆಹಲಿ ಪೊಲೀಸರು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

Published: 24th January 2021 08:32 PM  |   Last Updated: 24th January 2021 08:32 PM   |  A+A-


Farmers tractor-rally

ಟ್ರ್ಯಾಕ್ಟರ್ ರ್ಯಾಲಿ

Posted By : Srinivasamurthy VN
Source : PTI

ನವದೆಹಲಿ: ಭಾರತದ ರೈತರ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300ಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ ಎಂದು ದೆಹಲಿ ಪೊಲೀಸರು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾಕಾರ ರೈತರು ಪ್ರಸ್ತಾಪಿಸಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300 ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಟ್ರಾಕ್ಟರ್ ಪರೇಡ್ ಕುರಿತು ಮಾತನಾಡಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ (ಗುಪ್ತಚರ) ದೀಪೇಂದ್ರ ಪಾಠಕ್, ಗಣರಾಜ್ಯೋತ್ಸವ ಆಚರಣೆಗಳು ಮುಕ್ತಾಯಗೊಂಡ ನಂತರ ಮಂಗಳವಾರ ರ್ಯಾಲಿಯನ್ನು ಬಿಗಿ ಭದ್ರತೆಯ ನಡುವೆ ನಡೆಸಲಾಗುವುದು ಎಂದು ಹೇಳಿದರು.

ಜನರ ದಾರಿ ತಪ್ಪಿಸಿ ತಪ್ಪು ಮಾಹಿತಿ ರವಾನಿಸಲು ಜನವರಿ 13 ರಿಂದ 18 ರವರೆಗೆ ಪಾಕಿಸ್ತಾನದಲ್ಲಿ 300 ಕ್ಕೂ ಹೆಚ್ಚು ಟ್ವಿಟರ್ ಹ್ಯಾಂಡಲ್‌ಗಳನ್ನು ತೆರೆಯಲಾಗಿದೆ. ಈ ಬಗ್ಗೆ ಇಲಾಖೆಗೆ ಹಲವು ಏಜೆನ್ಸಿಗಳು ನಂಬಲಾರ್ಹ ಮಾಹಿತಿ ನೀಡಿದ್ದು, ಇಂತಹ ಪ್ರಕರಣಗಳನ್ನು ನಿರ್ವಹಿಸುವುದು ಇಲಾಖೆಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಅದಾಗ್ಯೂ ಗಣರಾಜ್ಯೋತ್ಸವ ಪರೇಡ್ ಬಳಿಕವೇ ಟ್ರಾಕ್ಟರ್ ರ್ಯಾಲಿಯನ್ನು ಬಿಗಿ ಭದ್ರತೆ ನಡುವೆ ನಡೆಸಲು ಅನುವು ಮಾಡಿಕೊಡಲಾಗುತ್ತದೆ ಎಂದು  ಪತ್ರಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ ವರ್ಷ ನವೆಂಬರ್‌ನಿಂದ, ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣ ಮೂಲದ ರೈತರು, ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಸಿಂಗು, ಟಿಕ್ರಿ ಮತ್ತು ಗಾಜಿಪುರ ಸೇರಿದಂತೆ ಹಲವು ದೆಹಲಿ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಮುಂದುವರೆದ ಭಾಗವಾಗಿ ರೈತ ಮುಖಂಡರು ತಮ್ಮ ಟ್ರಾಕ್ಟರ್ ಪೆರೇಡ್ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ಪೊಲೀಸರು ಟ್ರಾಕ್ಟರ್ ರ್ಯಾಲಿಯನ್ನು ದೆಹಲಿ ಹೊರವಲಯದಲ್ಲಿ ನಡೆಸುವಂತೆ ಪೊಲೀಸರು ರೈತರ ಮನವೊಲಿಸಿದ್ದಾರೆ. ದೆಹಲಿ ಹೊರವಲಯದ ಔಟರ್ ರಿಂಗ್ ರಸ್ತೆಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಲು ರೈತರು ಮುಂದಾಗಿದ್ದಾರೆ.  

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp