ಸೈನಿಕರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ ಚೀನಾಗೆ ಭಾರತ ತಾಕೀತು

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ನಿಯೋಜಿಸಿರುವ ಸಾವಿರಾರು ಚೀನಾ ಯೋಧರನ್ನು ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಭಾರತ ಚೀನಾಕ್ಕೆ ತಾಕೀತು ಮಾಡಿದೆ.

Published: 25th January 2021 04:54 PM  |   Last Updated: 25th January 2021 04:54 PM   |  A+A-


Indian Army

ಭಾರತೀಯ ಸೇನೆ

Posted By : Vishwanath S
Source : UNI

ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ನಿಯೋಜಿಸಿರುವ ಸಾವಿರಾರು ಚೀನಾ ಯೋಧರನ್ನು ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಭಾರತ ಚೀನಾಕ್ಕೆ ತಾಕೀತು ಮಾಡಿದೆ.

ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ನಡುವೆ ನಡೆದ 9ನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತ ಪ್ರಬಲವಾಗಿ ಒತ್ತಾಯಿಸಿದೆ.

ಚೀನಾ ಪೂರ್ವ ಲಡಾಖ್ ಪ್ರದೇಶದಲ್ಲಿ ನವೆಂಬರ್ 6ರಂದು ಟ್ಯಾಂಕ್ ಗಳು, ವೈಮಾನಿಕ ರಕ್ಷಣಾ ಸಾಮಗ್ರಿಗಳೊಂದಿಗೆ ಸುಮಾರು 50 ಸಾವಿರ ಪಡೆಗಳನ್ನು ನಿಯೋಜಿಸಿದ ಬಳಿಕ ಎರಡು ದೇಶಗಳ ನಡುವೆ ಮಾತುಕತೆ ನಡೆದಿತ್ತು.

ಮಾತುಕತೆ ತಡರಾತ್ರಿವರೆಗೂ ಜರುಗಿದೆ ಭಾರತ ನಿಯೋಗದ ನೇತೃತ್ವ ವಹಿಸಿದ್ದ ಲೇಹ್ ಮೂಲದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಎಲ್ಎಸಿಯಲ್ಲಿನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾಕ್ಕೆ ಒತ್ತಾಯಿಸಿದರು ಎಂದು ಸೇನಾ ಮೂಲಗಳು ಹೇಳಿವೆ.

ಕಳೆದ ವರ್ಷದ ಆರಂಭದಿಂದ ಇದುವರೆಗೂ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾದ ಲಕ್ಷಕ್ಕೂ ಅಧಿಕ ಪಡೆಗಳು ಗಡಿಯಲ್ಲಿ ಬೀಡುಬಿಟ್ಟಿವೆ. ಕಳದೆ ನವೆಂಬರ್ 6ರಂದು ನಡೆದ 8 ನೇ ಸುತ್ತಿನ ಮಾತುಕತೆಯಲ್ಲೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಪಡೆಗಳನ್ನು ಎರಡೂ ಕಡೆಯಿಂದ ವಾಪಸ್ ಕರೆಸಿಕೊಳ್ಳುವ ಬಗ್ಗೆ ಮಹತ್ವದ ಮಾತುಕತೆ ನಡೆದಿತ್ತು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp