ಡಿಆರ್ಡಿಒ ಹೊಸ ಮೈಲಿಗಲ್ಲು: ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಚೊಚ್ಚಲ ಉಡಾವಣೆ ಪರೀಕ್ಷೆ ಯಶಸ್ವಿ!
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹೊಸ ತಲೆಮಾರಿನ ಆಕಾಶ್ ಕ್ಷಿಪಣಿಯ ಚೊಚ್ಚಲ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.
Published: 25th January 2021 06:58 PM | Last Updated: 25th January 2021 06:58 PM | A+A A-

ಆಕಾಶ್ ಕ್ಷಿಪಣಿ
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹೊಸ ತಲೆಮಾರಿನ ಆಕಾಶ್ ಕ್ಷಿಪಣಿಯ ಚೊಚ್ಚಲ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.
ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಯ ಪರೀಕ್ಷೆಯನ್ನು ಡಿಆರ್ ಡಿಒ ನಡೆಸಿತ್ತು. ಆಕಾಶ್ ಕ್ಷಿಪಣಿ ನಿರ್ದಿಷ್ಠ ಗುರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ವಿಜ್ಞಾನಿಗಳ ತಂಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
DRDO conducted successful maiden launch of Akash-NG (New Generation) Missile from Integrated Test Range off the coast of Odisha today. Akash-NG is a new generation Surface-to-Air Missile meant for use by IAF with an aim of intercepting high manoeuvring aerial threats: DRDO pic.twitter.com/n7qH50GTwt
— ANI (@ANI) January 25, 2021
ಒಡಿಶಾದಲ್ಲಿ ನಡೆದ ಪರೀಕ್ಷಾರ್ಥ ಉಡಾವಣೆಯಲ್ಲಿ ಡಿಆರ್ ಡಿಒ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಹಾಗೂ ಭಾರತೀಯ ವಾಯುಪಡೆಯ ಪ್ರತಿನಿಧಿಗಳು ಭಾಗಿಯಾಗಿದ್ದರು.