ಜೈ ಶ್ರೀರಾಮ್ ಹೇಳುವಂತೆ ಯಾರನ್ನೂ ಒತ್ತಾಯಿಸಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಜೈ ಶ್ರೀರಾಮ್ ಹೇಳಿ ಎಂದು ಯಾರನ್ನೂ ಒತ್ತಾಯಿಸಿಲ್ಲ. ಜೈ ಶ್ರೀರಾಮ್ ಹೇಳಿರುವುದರಲ್ಲಿ ತಪ್ಪಾಗಿ ತಿಳಿಯುವುದು ಏನೂ ಇಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಹೇಳಿದ್ದಾರೆ. 

Published: 25th January 2021 01:18 PM  |   Last Updated: 25th January 2021 01:18 PM   |  A+A-


Yogi Adityanath and Mamata Banerjee

ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ

Posted By : Manjula VN
Source : The New Indian Express

ಲಖನೌ: ಜೈ ಶ್ರೀರಾಮ್ ಹೇಳಿ ಎಂದು ಯಾರನ್ನೂ ಒತ್ತಾಯಿಸಿಲ್ಲ. ಜೈ ಶ್ರೀರಾಮ್ ಹೇಳಿರುವುದರಲ್ಲಿ ತಪ್ಪಾಗಿ ತಿಳಿಯುವುದು ಏನೂ ಇಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಹೇಳಿದ್ದಾರೆ. 

ನೇತಾಜಿ ಸುಭಾಷ್ ಚಂದ್ರಬೋಸ್ ರ 125 ಜನ್ಮದಿನಾಚರಣೆಯ ಅಂಗವಾಗಿ ದೇಶಾದ್ಯಂತ ಪರಾಕ್ರಮ ದಿನ ಎಂದು ಆಚರಿಸಲಾಗುತ್ತಿದೆ. ಇದರಂತೆ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿಯನ್ನು ಭಾಷಣ ಮಾಡಲು ಆಹ್ವಾನಿಸಲಾಗಿತ್ತು. ಮಮತಾ ಅವರು ಮೈಕ್ ಮುಂದೆ ಬರುತ್ತಿದ್ದಂತೆ ಅಲ್ಲಿದ್ದ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. 

ಇದರಿಂದ ಬೇಸರಗೊಂಡಿದ್ದ ಮಮತಾ ಬ್ಯಾನರ್ಜಿಯವರು,  ನಿಮ್ಮ ವರ್ತನೆ ಖಂಡಿಸಿ ನಾನು ಭಾಷಣ ಮಾಡುವುದಿಲ್ಲ. ಭಾಷಣ ಮಾಡಲು ಕರೆಸಿ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಇದು ಸರ್ಕಾರಿ ಕಾರ್ಯಕ್ರಮ. ಯಾವುದೇ ಒಂದು ಪಕ್ಷದ ಕಾರ್ಯಕ್ರಮವನ್ನು ಎಂದು ಹೇಳಿ ನಿರ್ಗಮಿಸಿದ್ದರು. ಈ ಘಟನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯೋಗಿ ಆದಿತ್ಯನಾಥ್ ಅವರು, ಯಾರಾದರೂ ಜೈ ಶ್ರೀರಾಮ್ ಎಂದು ಹೇಳಿದರೆ, ಅದರಲ್ಲಿ ತಪ್ಪಾಗಿ ತಿಳಿಯುವುದು ಏನೂ ಇಲ್ಲ. ಶುಭಾಶಯಗಳನ್ನು ಹೇಳಲೂ ಕೂಡ ಜೈ ಶ್ರೀರಾಮ್ ಎಂದು ಹೇಳಲಾಗುತ್ತದೆ. ಯಾರಾದರೂ 'ನಮಸ್ಕಾರ' ಅಥವಾ 'ಜೈ ಶ್ರೀ ರಾಮ್' ಎಂದು ಹೇಳಿದರೆ ಅದು ಅವರ ಶಿಷ್ಟಾಚಾರವನ್ನು ತೋರಿಸುತ್ತದೆ" ಎಂದು ಹೇಳಿದ್ದಾರೆ.

ಇದೇ ವೇಳೆ ಮಮತಾ ಬ್ಯಾನರ್ಜಿಯವರು ಬೇಸರಗೊಂಡು ಹಿಂತಿರುಗಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜೈ ಸ್ರೀರಾಮ್ ಎಂದು ಕೂಗುವಂತೆ ಯಾರನ್ನೂ ನಾವು ಒತ್ತಾಯಿಸಿಲ್ಲ. ಯಾರಾದರೂ ಕೂಗಿದರೆ ಅದರಲ್ಲಿ ತಪ್ಪಾಗಿ ತಿಳಿಯುವಂತಹದ್ದು ಏನೂ ಇಲ್ಲ ಎಂದು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp