
ಸಂಗ್ರಹ ಚಿತ್ರ
ನವದೆಹಲಿ: ಬ್ರಿಟನ್ನಿನಲ್ಲಿ ಹೊಸದಾಗಿ ಕಂಡು ಬಂದ ರೂಪಾಂತರಿ ಕೊರೋನ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆಯಾ ರಾಜ್ಯ ಸರ್ಕಾರಗಳು ಈ ಹಿಂದೆ ನಿಗದಿಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಪ್ರತ್ಯೇಕದಲ್ಲಿ ಇರಿಸಲಾಗಿದೆ ಎಂದೂ ಸಚಿವಾಲಯ ಈ ಹಿಂದೆಯೇ ಹೇಳಿತ್ತು.
ಅವರ ಆಪ್ತರನ್ನು ಕೂಡ ಪರೀಕ್ಷೆ ನಡೆಸಲಾಗಿದೆ. ಸಹ-ಪ್ರಯಾಣಿಕರು, ಕುಟುಂಬ ಸಂಪರ್ಕಗಳು ಮತ್ತು ಇತರರಿಗೆ ಸಮಗ್ರ ಸಂಪರ್ಕ ಟ್ರ್ಯಾಕಿಂಗ್ ಅನ್ನು ಆರಂಭಿಸಲಾಗಿದೆ. ಇತರ ಮಾದರಿಗಳ ಮೇಲೆ ಜಿನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.