ತಂಗಿಯನ್ನು ರಕ್ಷಿಸಲು ಗೂಳಿ ವಿರುದ್ಧ ಹೋರಾಡಿದ್ದ 13ರ ಹರೆಯದ ಹುಡುಗನಿಗೆ ಶೌರ್ಯ ಪ್ರಶಸ್ತಿ!

ಈ ವರ್ಷದ ‘ಶೌರ್ಯ ಪ್ರಶಸ್ತಿ’ ವಿಜೇತರ ಪಟ್ಟಿಯಲ್ಲಿ ಬರಾಬಂಕಿ ಜಿಲ್ಲೆಯ ಹದಿಹರೆಯದ ಬಾಲಕ ಸ್ಥಾನ ಪಡೆದಿದ್ದಾರೆ. 16 ವರ್ಷದ ಕುನ್ವರ್ ದಿವ್ಯಾನ್ಶ್ ವಯಸ್ಸಿಗೆ ಧೈರ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

Published: 25th January 2021 08:29 PM  |   Last Updated: 25th January 2021 08:29 PM   |  A+A-


Kunwar Divyansh

ಕುನ್ವರ್ ದಿವ್ಯಾನ್ಶ್

Posted By : Vishwanath S
Source : The New Indian Express

ಲಖನೌ: ಈ ವರ್ಷದ ‘ಶೌರ್ಯ ಪ್ರಶಸ್ತಿ’ ವಿಜೇತರ ಪಟ್ಟಿಯಲ್ಲಿ ಬರಾಬಂಕಿ ಜಿಲ್ಲೆಯ ಹದಿಹರೆಯದ ಬಾಲಕ ಸ್ಥಾನ ಪಡೆದಿದ್ದಾರೆ. 16 ವರ್ಷದ ಕುನ್ವರ್ ದಿವ್ಯಾನ್ಶ್ ವಯಸ್ಸಿಗೆ ಧೈರ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ದಿವ್ಯಾನ್ಶ್ ತನ್ನ ಸಹೋದರಿ ಮತ್ತು ಗೂಳಿ ನಡುವೆ ಗೋಡೆಯಂತೆ ನಿಂತನು. ರಸ್ತೆಮಾರ್ಗದ ಬಸ್ ನಿಲ್ದಾಣದ ಬಳಿ ಕೆರಳಿ ನಿಂತಿದ್ದ ಗೂಳಿ ಜೊತೆ ಹೋರಾಡುವ ಮೂಲಕ ಸಹೋದರಿ ಮಾತ್ರವಲ್ಲದೆ ಅವಳ ಏಳು ಶಾಲಾ ಸಹಪಾಠಿಗಳನ್ನು ಉಳಿಸಿದ್ದನು. ಆತನ ಧೈರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಬರಾಬಂಕಿಯ ನವಾಬ್‌ಗಂಜ್ ತಹಸಿಲ್‌ನ ಮಖ್ದಂಪುರ್ ನಿವಾಸಿ ದಿವ್ಯಾನ್ಶ್ ಅವರ ಧೈರ್ಯಕ್ಕಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸುಮಾರು ಎರಡು ಡಜನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತೀರಾ ಇತ್ತೀಚೆಗೆ, ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2021ಗೆ ಆಯ್ಕೆಯಾದರು.

ಸುಮಾರು ಮೂರು ವರ್ಷಗಳ ಹಿಂದೆ ಕೇವಲ 13 ವರ್ಷದವನಿದ್ದಾಗ ದಿವ್ಯಾನ್ಶ್‌ಗೆ 2018ರ ಜನವರಿಯಲ್ಲಿ ತನ್ನ ಐದು ವರ್ಷದ ಸಹೋದರಿ ಸಮೃಧಿ ಮತ್ತು ಇತರ ಏಳು ಶಾಲಾ ಮಕ್ಕಳೊಂದಿಗೆ ಮನೆಗೆ ಮರಳುತ್ತಿದ್ದಾಗ ಸಮೃಧಿಗೆ ಗೂಳಿ ಗುಮ್ಮಲು ಬಂದಿತ್ತು. ಆಗ ದಿವ್ಯಾನ್ಶ್ ತನ್ನ ಶಾಲೆಯ ಬ್ಯಾಗ್ ನಿಂದ ಗೂಳಿಯನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದನು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp