ವಾಟ್ಸಾಪ್ ಭಾರತೀಯ ಬಳಕೆದಾರರನ್ನು ಯುರೋಪಿಯನ್ನರಿಂದ ಭಿನ್ನವಾಗಿ ಪರಿಗಣಿಸುತ್ತಿದೆ: ಕೇಂದ್ರ ಸರ್ಕಾರ ಕಳವಳ

 ವಾಟ್ಸಾಪ್, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರವು ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

Published: 25th January 2021 01:15 PM  |   Last Updated: 25th January 2021 01:16 PM   |  A+A-


ವಾಟ್ಸಾಪ್

Posted By : Raghavendra Adiga
Source : PTI

ನವದೆಹಲಿ: ವಾಟ್ಸಾಪ್, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರವು ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ಮೂಲಕ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಕಾಳಜಿ ವ್ಯಕ್ತಪಡಿಸಿದೆ. 

ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಾಪ್ ಮೂಲಕ ಭಾರತೀಯ ಬಳಕೆದಾರರು "ಏಕಪಕ್ಷೀಯವಾಗಿ" ಗೌಪ್ಯತೆ ನೀತಿಯಲ್ಲಿ ಬದಲಾವಣೆಗೆಒಳಗಾಗುತ್ತಿದ್ದಾರೆ ಎಂಬ ಆತಂಕವೂ ಇದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಫೇಸ್‌ಬುಕ್ ಒಡೆತನದ ಸಾಮಾಜಿಕ ಜಾಲತಾಣದ ಹೊಸ ಗೌಪ್ಯತೆ ನೀತಿಯ ವಿರುದ್ಧ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಶರ್ಮಾ ಅವರು ಭಾರತೀಯ ಬಳಕೆದಾರರಿಗೆ ತಮ್ಮ ಡೇಟಾವನ್ನು ಫೇಸ್‌ಬುಕ್‌ನ ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯುವ ಆಯ್ಕೆಯನ್ನು ನೀಡದಿರುವ ಮೂಲಕ, ವಾಟ್ಸಾಪ್ "ಬಳಸಿ ಇಲ್ಲವೇ ಬಿಟ್ಟುಬಿಡಿ" ಎಂಬ ವಿಧಾನ ಅಳವಡಿಸಿಕೊಂಡಂತೆ ಕಾಣುತ್ತದೆ ಎಂದು ಹೇಳಿದರು. "ಇದು ಮಾಹಿತಿ ಗೌಪ್ಯತೆ ಮತ್ತು ಮಾಹಿತಿ ಸುರಕ್ಷತೆ ಸಂಬಂಧ ಹಿತಾಸಕ್ತಿಗಳನ್ನು ಉಲ್ಲಂಘಿಸುವಂತಹ ಚೌಕಾಶಿಗೆ ಬಳಕೆದಾರರನ್ನುಒತ್ತಾಯಿಸುತ್ತಿದೆ ಎಂದು ಕಾಣುತ್ತಿದೆ. ವಾಟ್ಸಾಪ್ ನ ಸಾಮಾಜಿಕ ಮಹತ್ವವನ್ನು ಇದು ನಿಯಂತ್ರಿಸುತ್ತದೆ" ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರ ಈಗಾಗಲೇ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಮತ್ತು ಕೆಲವು ಮಾಹಿತಿ ಕೋರಿ ವಾಟ್ಸಾಪ್ ಗೆ ಸಂದೇಶ ಕಳುಹಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ವಾಟ್ಸಾಪ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಸರ್ಕಾರದಿಂದ ಸಂದೇಶ ಸ್ವೀಕರಿಸಲಾಗಿದೆ, ಶೀಘ್ರವೇ ಪ್ರತಿಕ್ರಿಯಿಸಲಾಗುವುದು ಎಂದರು. ನಂತರ ನ್ಯಾಯಾಲಯವು ಮಾರ್ಚ್ 1ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿತು. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp