ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ: 83 ಪೊಲೀಸರಿಗೆ ಗಾಯ, ನೂರಾರು ವಾಹನ ಜಖಂ, ಪ್ರಕರಣ ದಾಖಲು

ರೈತರ ಟ್ರಾಕ್ಟರ್ ರ್ಯಾಲಿ ವೇಳೆ ಉಂಟಾದ ಹಿಂಸಾಚಾರದಲ್ಲಿ 83 ಪೊಲೀಸರು ಗಾಯಗೊಂಡಿದ್ದು ಪೊಲೀಸ್ ವಾಹನಗಳೂ ಸೇರಿದಂತೆ ನೂರಾರು ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ.

Published: 26th January 2021 11:59 PM  |   Last Updated: 27th January 2021 01:12 PM   |  A+A-


Delhi Joint Commissioner of Police Alok Kumar

ದೆಹಲಿ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

Posted By : Srinivasamurthy VN
Source : ANI

ನವದೆಹಲಿ: ರೈತರ ಟ್ರಾಕ್ಟರ್ ರ್ಯಾಲಿ ವೇಳೆ ಉಂಟಾದ ಹಿಂಸಾಚಾರದಲ್ಲಿ 83 ಪೊಲೀಸರು ಗಾಯಗೊಂಡಿದ್ದು ಪೊಲೀಸ್ ವಾಹನಗಳೂ ಸೇರಿದಂತೆ ನೂರಾರು ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ.

ರೈತರ ಟ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ದೆಹಲಿ ಹೆಚ್ಚುವರಿ ಡಿಸಿಪಿ (ಪೂರ್ವ) ಮಂಜೀತ್ ಅವರೂ ಸೇರಿದಂತೆ ಸುಮಾರು 83 ಮಂದಿ ಪೊಲೀಸರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಮಂಜೀತ್ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲ್ಲಲು ಯತ್ನಿಸಲಾಗಿತ್ತು. ಆದೃಷ್ಟವಶಾತ್ ಅವರು ಪಾರಾಗಿದ್ದಾರೆ. ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಪೂರ್ವ ದೆಹಲಿಯಲ್ಲಿನ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ದ್ವಾರಕಾದಲ್ಲಿ ನಡೆದ ಹಿಂಸಾಚಾರದಲ್ಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೇರಿದಂತೆ 30 ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಸಂಬಂಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು  ಹೇಳಿದರು.

ಅಂತೆಯೇ ಇಂದು ಎಂಟು ಬಸ್ಸುಗಳು ಮತ್ತು 17 ಖಾಸಗಿ ವಾಹನಗಳನ್ನು ಧ್ವಂಸ ಮಾಡಲಾಗಿದೆ. ಮುಕರ್ಬಾ ಚೌಕ್, ಗಾಜಿಪುರ, ಎ-ಪಾಯಿಂಟ್ ಐಟಿಒ, ಸೀಮಾಪುರಿ, ನಂಗ್ಲೋಯಿ ಟಿ-ಪಾಯಿಂಟ್, ಟಿಕ್ರಿ ಬಾರ್ಡರ್ ಮತ್ತು ಕೆಂಪು ಕೋಟೆಯಿಂದ ಹೆಚ್ಚಿನ ಘಟನೆಗಳು ವರದಿಯಾಗಿವೆ. ವಿಧ್ವಂಸಕ ಕೃತ್ಯದಲ್ಲಿ 86 ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಹಲವಾರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾಗಿದೆ. ಪ್ರಸ್ತುತ ದೆಹಲಿ ಪೊಲೀಸರು ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾ ಇಟ್ಟಿದ್ದಾರೆ ಮತ್ತು ಕಾನೂನುಬದ್ಧ ನಿರ್ದೇಶನಗಳ ಉಲ್ಲಂಘನೆ, ಗಲಭೆ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ವಿವಿಧ ಸ್ಥಳಗಳಿಂದ ವರದಿಯಾದ ಹಲವಾರು ಘಟನೆಗಳಿಗೆ ಸಂಬಂಧಿಸಿದಂತೆ ಮಾರಣಾಂತಿಕ ಆಯುಧಗಳಿಂದ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದರು. 

ಇನ್ನು ಧೌಲಾ ಕುವಾನ್‌ನಿಂದ ನಾರೈನಾ ರಸ್ತೆಯಲ್ಲಿ ಸಂಚಾರ  ಈಗ ಸಾಮಾನ್ಯವಾಗಿದೆ. ಗಲಭೆ ವೇಳೆ ಕೆಂಪು ಕೋಟೆಯಲ್ಲಿ ಮಕ್ಕಳು ಸೇರಿದಂತೆ ಸುಮಾರು 300 ಕಲಾವಿದರು ಇದ್ದರು. ನಾವು ಅವರಿಗೆ ಆಹಾರವನ್ನು ಒದಗಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆವು ಎಂದು ಅಲೋಕ್ ಕುಮಾರ್ ಹೇಳಿದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp