ಭೀಕರ ವಿಡಿಯೋ: ಬ್ಯಾರಿಕೇಡ್ ಮುರಿಯಲು ಟ್ರಾಕ್ಟರ್ ನುಗ್ಗಿಸಿದ ವ್ಯಕ್ತಿ, ಟ್ರಾಕ್ಟರ್ ಮಗುಚಿ ಸಾವು
ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಲು ಹೋಗಿ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾರೆ.
Published: 26th January 2021 09:19 PM | Last Updated: 26th January 2021 09:19 PM | A+A A-

ಟ್ರಾಕ್ಟರ್ ಮಗುಚಿ ರೈತ ಸಾವು
ನವದೆಹಲಿ: ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಲು ಹೋಗಿ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾರೆ.
#WATCH | A protesting farmer died after a tractor rammed into barricades and overturned at ITO today: Delhi Police
— ANI (@ANI) January 26, 2021
CCTV Visuals: Delhi Police pic.twitter.com/nANX9USk8V
ದೆಹಲಿಯ ಐಟಿಒದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಪೊಲೀಸರು ರೈತರನ್ನು ತಡೆಯಲು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಲು ರೈತನೋರ್ವ ತನ್ನ ಟ್ರಾಕ್ಟಕ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬ್ಯಾರಿಕೇಡ್ ಗಳನ್ನು ಚದುರಿಸಲು ಮುಂದಾಗಿದ್ದ. ಆದರೆ ಬ್ಯಾರಿಕೇಡ್ ಗಳಿಗೆ ಟ್ರಾಕ್ಟರ್ ಗುದ್ದುತ್ತಿದ್ದಂತೆಯೇ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಗುಚಿ ಬಿದ್ದಿದೆ. ಈ ವೇಳೆ ರೈತ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದರೂ ಆತ ಅಷ್ಟು ಹೊತ್ತಿಗಾಲೇ ಸಾವನ್ನಪ್ಪಿದ್ದ.
ರೈತ ಬ್ಯಾರಿಕೇಡ್ ಗೆ ಟ್ರಾಕ್ಟರ್ ಗುದ್ದಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಪೊಲೀಸರಿಂದಲೇ ರೈತನ ಸಾವು ಆರೋಪ
ಇನ್ನು ರೈತನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿರುವ ರೈತರು, ಪೊಲೀಸರು ಗುಂಡು ಹಾರಿಸಿದ್ದರಿಂದಲೇ ರೈತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.