ಗಣರಾಜ್ಯೋತ್ಸವ: ರಾಜಪಥ್'ನಲ್ಲಿ ಪ್ರಧಾನಿ ಮೋದಿ ತೊಟ್ಟ ಕೇಸರಿ ಪೇಟ ಬಹಳ ವಿಶೇಷವನ್ನು ಹೊಂದಿದೆ, ಏನದು? ಇಲ್ಲಿದೆ ಮಾಹಿತಿ...

ದೇಶದಾದ್ಯಂತ 72 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ಈ ನಡುವಲ್ಲೇ ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಎಲ್ಲರ ಗಮನ ಸೆಳೆದಿದೆ. 

Published: 26th January 2021 11:06 AM  |   Last Updated: 26th January 2021 11:06 AM   |  A+A-


PM modi

ಪ್ರಧಾನಿ ಮೋದಿ

Posted By : Manjula VN
Source : Online Desk

ನವದೆಹಲಿ: ದೇಶದಾದ್ಯಂತ 72 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ಈ ನಡುವಲ್ಲೇ ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಎಲ್ಲರ ಗಮನ ಸೆಳೆದಿದೆ. 

ಪ್ರಧಾನಿ ಮೋದಿಯವರು ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದು, ಪ್ರಮುಖವಾಗಿ ಮೋದಿಯವರು ಧರಿಸಿದ್ದ ವಿಶೇಷ ಪೇಟ ಎಲ್ಲರ ಗಮನವನ್ನು ಸೆಳೆದಿದೆ. 

ಕೇಸರಿ ಬಣ್ಣದ ವಿಭಿನ್ನ ವಿನ್ಯಾಸ ಹೊಂದಿರುವ ಪೇಟವನ್ನು ಪ್ರಧಾನಿ ಮೋದಿ ರಾಜಪಥ್‌ನಲ್ಲಿ ನಡೆಯುತ್ತಿರುವ ಗಣರಾಜ್ಯ ದಿನದ ಪರೇಡ್‌ಗೆ ಆಗಮಿಸುವ ವೇಳೆ ತೊಟ್ಟಿದ್ದಾರೆ. ಈ ಪೇಟ ಇದೀಗ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿದೆ. 

ಇಷ್ಟಕ್ಕೂ ಪೇಟದ ವಿಶೇಷವೇನು ಇಲ್ಲಿದೆ ಮಾಹಿತಿ...
ಪ್ರಧಾನಿ ಮೋದಿಯವರು ಇಂದು ಧರಿಸಿದ್ದ ಪೇಟ ಅಂತಿಂತಾ ಪೇಟವಲ್ಲ. ರಾಜಮನೆತನದ ಪೇಟವಾಗಿದೆ. ಗುಜರಾತ್‌ನ ಜಮಾನಗರದ ರಾಜಮನೆತನದವರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ಪೇಟ ಇದಾಗಿದೆ. 

ದೇ ಮೊದಲ ಬಾರಿಗೆ ಈ ರಾಜಮನೆತನ ಹೊರಗಿನವರಿಗೆ ಪೇಟವನ್ನು ನೀಡಿದ್ದಾರೆ. ಈ ಪೇಟವನ್ನೇ ಇದೀಗ ಪ್ರಧಾನಿ ಮೋದಿ ತೊಟ್ಟಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp