ಕೊವಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಕಂಡುಬರಲು ಕೆಲವು ವಾರಗಳು ಬೇಕಾಗಬಹುದು: ಮೂಲಗಳು
ಭಾರತದ ಮೊದಲ ದೇಶಿ ನಿರ್ಮಿತ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು ಇನ್ನೂ ಏಳು ರಾಜ್ಯಗಳ ಜನತೆಗೆ ನೀಡಲಾಗಿದ್ದು, ಇದರ ಪರಿಣಾಮ ಗೊತ್ತಾಗಲು ಕೆಲವು ವಾರಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
Published: 26th January 2021 10:42 AM | Last Updated: 26th January 2021 10:42 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದ ಮೊದಲ ದೇಶಿ ನಿರ್ಮಿತ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು ಇನ್ನೂ ಏಳು ರಾಜ್ಯಗಳ ಜನತೆಗೆ ನೀಡಲಾಗಿದ್ದು, ಇದರ ಪರಿಣಾಮ ಗೊತ್ತಾಗಲು ಕೆಲವು ವಾರಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಭರತ್ ಬಯೋಟೆಕ್ ಕೊವಾಕ್ಸಿನ್ ಲಸಿಕೆಯನ್ನು ಕೋವಿಶೀಲ್ಡ್ ಜೊತೆಗೆ ನಿನ್ನೆ ಚತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಜನತೆಗೆ ನೀಡಲಾಗಿದೆ.ಕಳೆದ ಭಾನುವಾರದವರೆಗೆ 12 ರಾಜ್ಯಗಳಲ್ಲಿ ಮಾತ್ರ ಕೊವಾಕ್ಸಿನ್ ಮತ್ತು ಸೆರಂ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿತ್ತು.
ಕಳೆದ ವಾರ ಹೇಳಿಕೆ ನೀಡಿದ್ದ ಭರತ್ ಬಯೋಟೆಕ್, ಕೊವಾಕ್ಸಿನ್ ನ ಎರಡನೇ ಸುತ್ತನ್ನು 13 ಸಾವಿರ ಮಂದಿಗೆ ಯಶಸ್ವಿಯಾಗಿ ನೀಡಲಾಗಿದ್ದು, ಸದ್ಯ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿತ್ತು.